February 3, 2026

ಬಂಟ್ವಾಳ: ಅಪರಿಚಿತ ಮೃತದೇಹ ಪತ್ತೆ: ಗುರುತು ಪತ್ತೆ ಹಚ್ಚಲು ಪೊಲೀಸರಿಂದ ಮನವಿ

0
image_editor_output_image498616704-1706200759948

ಬಂಟ್ವಾಳ: ಅಪರಿಚಿತ ವ್ಯಕ್ತಿಯೊರ್ವರ ಮೃತದೇಹದ ವಾರೀಸುದಾರರ ಗುರುತು ಪತ್ತೆಗಾಗಿ ಪೊಲೀಸ್ ಇಲಾಖೆ ಮಾಧ್ಯಮ ಮೂಲಕ ಮನವಿ ಮಾಡಿದೆ.

ಬಂಟ್ವಾಳ ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸರಕಾರಿ ಆಸ್ಪತ್ರೆಯಲ್ಲಿ ಕೃಷ್ಣಪ್ಪ ಎಂಬವರು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ವಿಪರೀತ ಅಸ್ವಸ್ಥಗೊಂಡಿದ್ದ ಇವರನ್ನು 108 ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಅಲ್ಲಿನ ವೈದ್ಯರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಶವಗಾರದಲ್ಲಿ ಇಡಲಾಗಿತ್ತು. ಆದರೆ ಕೃಷ್ಣಪ್ಪ ಎಂದು ಹೆಸರು ಬಿಟ್ಟು ಯಾವುದೇ ವಿಳಾಸ ನೀಡದೆ ಆಸ್ಪತ್ರೆಗೆ ದಾಖಲಾದ ಕಾರಣ ಇವರ ಕುಟುಂಬದವರನ್ನು ಹುಡುಕುವುದು ಕಷ್ಟವಾಗಿದೆ. ಹಾಗಾಗಿ ಇವರ ಗುರುತು ಪತ್ತೆಗಾಗಿ ಮಾಧ್ಯಮ ಮೂಲಕ ಮನವಿ ಮಾಡಿದೆ.

ಇನ್ನು ಈ ವ್ಯಕ್ತಿಯ ಗುರುತು ಸಿಕ್ಕಿದರೆ ಬಂಟ್ವಾಳ ನಗರ ಪೋಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ಎಸ್. ಐ.ರಾಮಕೃಷ್ಣ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!