March 20, 2026

ಟ್ಯೂಷನ್ ಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆ

0
image_editor_output_image639497328-1705991244265.jpg

ಬೆಂಗಳೂರು: ಟ್ಯೂಷನ್ಗೆ ತೆರಳಿದ್ದ 12 ವರ್ಷದ ಬಾಲಕ ನಿಗೂಢವಾಗಿ ನಾಪತ್ತೆ ಆಗಿರುವಂತಹ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.

ವಿಜಯನಗರದ ಸುಖೇಶ್, ನಿವೇದಿತಾ ದಂಪತಿ ಪುತ್ರ ಪರಿನವ್ ನಾಪತ್ತೆ ಆದ ಬಾಲಕ. ಗುಂಜೂರಿನ ಡೆನ್ ಅಕಾಡೆಮಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಪರಿನವ್, ಭಾನುವಾರ ಮಧ್ಯಾಹ್ನ 12.15ರ ಸುಮಾರಿಗೆ ನಾಪತ್ತೆ ಆಗಿದ್ದಾನೆ.

ವೈಟ್ಫೀಲ್ಡ್ನ ಅಲೆನ್ ಟೂಷನ್ ಸೆಂಟರ್ಗೆ ತಂದೆ ಡ್ರಾಪ್ ಮಾಡಿದ್ದಾರೆ. ಮಧ್ಯಾಹ್ನ ಕರೆತರಲು ಹೋಗುವುದು ತಡವಾಗಿದ್ದರಿಂದ ನಾಪತ್ತೆ ಆಗಿದ್ದಾನೆ.

ಟ್ಯೂಷನ್ ಸೆಂಟರ್ನಿಂದ ಮಾರತ್ತಹಳ್ಳಿವರೆಗೆ ಬಾಲಕ ನಡೆದುಬಂದಿದ್ದು, ನಂತರ ಬಿಎಂಟಿಸಿ ಬಸ್ ಹತ್ತಿರುವ ಸಿಸಿಕ್ಯಾಮರಾ ದೃಶ್ಯ ಲಭ್ಯವಾಗಿದೆ.

ಆನಂತರ ಬಾಲಕ ಪರಿನವ್ ಎಲ್ಲಿ ಹೋದನೆಂದು ಈವರೆಗೂ ಪತ್ತೆಯಾಗಿಲ್ಲ. ಬಾಲಕ ನಾಪತ್ತೆ ಬಗ್ಗೆ ವೈಟ್ಫೀಲ್ಡ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ನಾಪತ್ತೆಯಾದ ಪರಿನವ್ಗಾಗಿ ವೈಟ್ಫೀಲ್ಡ್ ಠಾಣೆ ಪೊಲೀಸರು ಶೋಧ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!