ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗು ಹೃದಯಾಘಾತದಿಂದ ಮೃತ್ಯು
ಲಕ್ನೋ: ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವೊಂದು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕೊತ್ವಾಲಿಯದ ಹತೈಖೇಡಾದಲ್ಲಿ ಭಾನುವಾರ(ಜ.21 ರಂದು) ನಡೆದಿದೆ.
ಮಗು ಕಾಮಿನಿ ಬೆಡ್ ನಲ್ಲಿ ತನ್ನ ಅಮ್ಮನ ಪಕ್ಕದಲ್ಲಿ ಮಲಗಿಕೊಂಡು ಮೊಬೈಲ್ ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿತ್ತು. ಈ ವೇಳೆ ಮಗುವಿನ ಕೈಯಿಂದ ಫೋನ್ ಇದ್ದಕ್ಕಿದ್ದಂತೆ ಕೆಳಗೆ ಬಿದ್ದಿದೆ. ಆ ಬಳಿಕ ಮಗು ಪ್ರಜ್ಞಾಹೀನವಾಗಿ ಬಿದ್ದಿದೆ. ಗಾಬರಿಗೊಂಡ ತಾಯಿ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದ ಬಳಿಕ ಮಗು ಆದಾಗಲೇ ಮೃತಪಟ್ಟಿದೆ ಎಂದು ಹೇಳಿದ್ದಾರೆ.
“ಮಗು ಹೃದಯಾಘಾತದಿಂದ ಸಾವನ್ನಪ್ಪಿರಬಹುದು” ಎಂದು ಹಸನಪುರ ಸಮುದಾಯ ಆರೋಗ್ಯ ಕೇಂದ್ರದ ಪ್ರಭಾರಿ ಧ್ರುವೇಂದ್ರಕುಮಾರ್ ಹೇಳಿದ್ದಾರೆ.




