May 6, 2026

ಉಡುಪಿ: ಹುಲ್ಲು, ಕುರುಚಲು ಗಿಡಗಳಿಗೆ ಆಕಸ್ಮಿಕ ಬೆಂಕಿ

0
IMG-20240114-WA0013.jpg


 
ಮಣಿಪಾಲ: ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿರುವ ಖಾಲಿ ನಿವೇಶನ ಒಂದರಲ್ಲಿನ ಹುಲ್ಲು, ಕುರುಚಲು ಗಿಡಗಳಿಗೆ ಆಕಸ್ಮಿಕ ವಾಗಿ ಬೆಂಕಿ ತಗುಲಿದ ಘಟನೆ ಆದಿತ್ಯವಾರದಂದು ಸಂಭವಿಸಿದೆ.

ರಾಯಲ್ ಎಂಬಸಿ ಕಟ್ಟಡದ ಹಿಂಬದಿಯಲ್ಲಿ ಇರುವ ಖಾಲಿ ನಿವೇಶನದಲ್ಲಿ ಘಟನೆ ನಡೆದಿದ್ದು, ಬೆಂಕಿ ತಗುಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪರಿಸರದಲ್ಲಿ ತೀವ್ರ, ದಟ್ಟವಾದ ಹೊಗೆ ಆವರಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು.

ಸ್ಥಳಕ್ಕೆ ‌ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರು.‌”

Leave a Reply

Your email address will not be published. Required fields are marked *

error: Content is protected !!