March 28, 2026

ಉಳ್ಳಾಲ: ಎಂಡಿಎಂಎ ಸಾಗಾಟ: ಯುವಕನ ಬಂಧನ

0
IMG-20230504-WA0062.jpg

ಉಳ್ಳಾಲ: ಮಾದಕ ವಸ್ತು ಎಂಡಿಎಂಎನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಯುವಕನನ್ನು ಮಂಗಳೂರು ಆ್ಯಂಟಿ ಡ್ರಗ್‌ ಟೀಮ್‌ನ ತಂಡ ಬಂಧಿಸಿದೆ.

ಬಂಧಿತ ಆರೋಪಿಯನ್ನು ಕೋಟೆಕಾರು ಕೆ.ಸಿ. ರೋಡ್‌ ನಿವಾಸಿ ಆಸೀಫ್‌ (27)ಎಂದು ಗುರುತಿಸಲಾಗಿದೆ. ಆರೋಪಿಯಿಂದ 4.41 ಗ್ರಾಂ ಎಂಡಿಎಂಎ ಸಹಿತ ಸಾಗಾಟಕ್ಕೆ ಬಳಸಿದ್ದ ಬೈಕ್‌ ಹಾಗೂ ಸುಮಾರು 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೋಟೆಕಾರ್‌ ಗ್ರಾಮದ ಕೆ.ಸಿ. ನಗರ ಯು.ಜಿ. ಗೇಟ್‌ರೋಡ್‌ನ‌ ಸಾರ್ವಜನಿಕ ರಸ್ತೆ ಬದಿಯ ಖಾಲಿ ಜಾಗದ ಬಳಿಗೆ ದಾಳಿ ನಡೆಸಿ ಈತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!