March 26, 2026

ಕ್ರಿಕೆಟ್ ಪಂದ್ಯಾಟ ಆಡುತ್ತಿದ್ದಾಗ ಹಠಾತ್ ಕುಸಿದು ಬಿದ್ದು‌ ಆಟಗಾರ ಮೃತ್ಯು

0
image_editor_output_image-732157402-1704876583907.jpg

ನೋಯ್ಡಾ: ಕ್ರಿಕೆಟ್ ಮ್ಯಾಚ್ ಆಡುತ್ತಿದ್ದ ವ್ಯಕ್ತಿಯೊಬ್ಬ ರನ್ ತೆಗೆದುಕೊಳ್ಳುವಾಗ ಹಠಾತ್ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದು‌ ಮೃತಪಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ.

ಈ ವೇಳೆ ಅಲ್ಲಿದ್ದ ಇತರ ಆಟಗಾರರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದರು ಎನ್ನಲಾಗಿದೆ.

ಈ ಘಟನೆಯು ಥಾನಾ ಎಕ್ಸ್‌ಪ್ರೆಸ್‌ವೇ ಪ್ರದೇಶದ ಸೆಕ್ಟರ್ -135 ರಲ್ಲಿ ನಡೆದಿದ್ದು, ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಕೆಲವು ಮಂದಿ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಉತ್ತರಾಖಂಡ ಮೂಲದ 36 ವರ್ಷದ ವಿಕಾಸ್ ನೇಗಿ ಬ್ಯಾಟಿಂಗ್‌ಗೆ ಬಂದಿದ್ದರು. ಆಟದ ವೇಳೆ ವಿಕಾಸ್ ರನ್ ತೆಗೆದುಕೊಳ್ಳಲು ಓದಿದ್ದಾರೆ ಆದರೆ ಇದರ ನಡುವೆ ಹೃದಯಾಘಾತಕ್ಕೆ ಒಳಗಾಗಿ ಪಿಚ್ ನಲ್ಲೇ ಕುಸಿದು ಬಿದ್ದಿದ್ದಾರೆ. ಈ ವೇಳೆ ಅಲ್ಲಿದ್ದ ಇತರ ಆಟಗಾರರು ವಿಕಾಸ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟೊತ್ತಿಗಾಗಲೇ ತಡವಾಗಿತ್ತು. ವಿಕಾಸ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

Leave a Reply

Your email address will not be published. Required fields are marked *

error: Content is protected !!