ಮೂಡಿಗೆರೆ: ಯುವತಿಗೆ ಚಾಕ್ಲೇಟ್ ನೀಡಿದ ಅನ್ಯಕೋಮಿನ ಯುವಕನಿಗೆ ತಂಡದಿಂದ ಹಲ್ಲೆ
ಚಿಕ್ಕಮಗಳೂರು: ಮೂಡಿಗೆರೆ ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಅನ್ಯ ಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಲಾಗಿದೆ.
ಈ ಸಂಬಂಧ ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದ್ದು, ಐಪಿಸಿ ಸೆಕ್ಷನ್ 143, 144, 148, 323, 324, 504, 506, 149ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದೆ.
ಯುವತಿಗೆ ಡೈರಿ ಮಿಲ್ಕ್ ಚಾಕ್ಲೇಟ್ ನೀಡಿದ್ದಕ್ಕಾಗಿ ಅನ್ಯಕೋಮಿನ ಯುವಕನ ಮೇಲೆ ಕಾರಿನಲ್ಲಿ ಬಂದ ಮತ್ತೊಂದು ಯುವಕರ ತಂಡ ಹಲ್ಲೆ ನಡೆಸಿದ್ದು, ಸಿಸಿಕ್ಯಾಮರಾದಲ್ಲಿ ಹಲ್ಲೆ ನಡೆಸುತ್ತಿರುವ ದೃಶ್ಯ ಸೆರೆಯಾಗಿತ್ತು.
ಹಲ್ಲೆ ಪ್ರಕರಣ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.




