September 26, 2026

ಮೂಡಿಗೆರೆ: ಬಸ್ ನಿಲ್ದಾಣದಲ್ಲಿ ಅನೈತಿಕ ಪೊಲೀಸ್ ಗಿರಿ: ಯುವಕನಿಗೆ ಹಲ್ಲೆ

0
n5728637561704860882072b167451e76a10fbcb3d6c87a9a152095bbf6e2967c708a25999a1c9ab847cfde.jpg

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣ ದಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ. ಯುವತಿಯ ಜೊತೆ ನಿಂತಿದ್ದ ಯುವಕನಿಗೆ ಸಂಘಪರಿವಾರದ ಕಾರ್ಯಕರ್ತರೆನ್ನಲಾದ ತಂಡ ಹಲ್ಲೆ ನಡೆಸಿದ ಘಟನೆ ಮಂಗಳವಾರ ಸಂಜೆ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ವರದಿಯಾಗಿದೆ. ಘಟನೆಯ ವೀಡಿಯೊ ಬಸ್ ನಿಲ್ದಾಣದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಮುನೀರ್ ಎಂಬವರು ಹಲ್ಲೆಗೊಳಗಾದ ಯುವಕ. ಬಸ್ ನಿಲ್ದಾಣದಲ್ಲಿ ಯುವತಿಯ ಜೊತೆ ನಿಂತಿದ್ದಾಗ, ಕಾರಿನಲ್ಲಿ ಬಂದ ತಂಡ ಹಲ್ಲೆ ಮಾಡಿದೆ ಎಂದು ತಿಳಿದು ಬಂದಿದೆ.

 

ಈ ವೇಳೆ ಬಸ್ ನಿಲ್ದಾಣ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತತ್ ಕ್ಷಣವೇ ಆಗಮಿಸಿದ ಪಿಎಸೈ ಮತ್ತು ಸಿಬಂದಿ ಆಗಮಿಸಿ ಯುವಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!