September 26, 2026

ಸುಳ್ಯ: ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ:
ಮೂವರಿಗೆ ಗಾಯ

0
IMG-20240109-WA0032.jpg

ಸುಳ್ಯ: ಸಮೀಪದ ಆಲೆಟ್ಟಿ ಗ್ರಾಮದ ಪತಿವಾರಕಾನದಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಮೂವರು ಗಾಯಗೊಂಡ ಘಟನೆ ಮಂಗಳವಾರ ವರದಿಯಾಗಿದೆ.

ಗಾಯಗೊಂಡವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಕೂಟರ್ ಸವಾರರು ಮತ್ತು ಕಾರು ಚಾಲಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮಗುಚಿ ಬಿದ್ದದ್ದು, ಕಾರು ಮತ್ತು ಸ್ಕೂಟರ್ ಜಖಂಗೊಂಡಿದೆ.

 

Leave a Reply

Your email address will not be published. Required fields are marked *

You may have missed

error: Content is protected !!