February 4, 2026

ಉಪತಹಶೀಲ್ದಾರ್ ಕಿರುಕುಳಕ್ಕೆ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ

0
image_editor_output_image1191910592-1704698531630.jpg

ನಂಜನಗೂಡು: ಉಪ ತಹಸೀಲ್ದಾರ್ ಕಿರುಕುಳ ತಾಳಲಾರದೆ ಕಂಪ್ಯೂಟರ್ ಆಪರೇಟರ್ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಪರಮೇಶ್ ಆತ್ಮಹತ್ಯೆಗೆ ಶರಣಾದ ಕಂಪ್ಯೂಟರ್ ಆಪರೇಟರ್.

ವಿಕಲಚೇತನಾಗಿದ್ದ ಪರಮೇಶ್ ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ನಾಡ ಕಚೇರಿಯಲ್ಲಿ ಪರಮೇಶ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

ಇವರಿಗೆ ಉಪ ತಹಶೀಲ್ದಾರ್ ಶಿವಕುಮಾರ್ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇವರ ಕಿರುಕುಳ ತಾಳಲಾರದೆ ಪರಮೇಶ್ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು.

ಕೂಡಲೇ ಪರಮೇಶ್ ಅವರನ್ನು ಮೈಸೂರಿನ ಕೆ.ರ್.ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪರಮೇಶ್ ಮೃತಪಟ್ಟಿದ್ದಾರೆ. ನನ್ನ ಸಾವಿಗೆ ಉಪ ತಹಸೀಲ್ದಾರ್ ಶಿವಕುಮಾರ್ ಕಾರಣ ಎಂದು ಪರಮೇಶ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಹುಲ್ಲಹಳ್ಳಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

You may have missed

error: Content is protected !!