December 19, 2025

ಬಂಟ್ವಾಳ: ತೂಕದ ಯಂತ್ರದಲ್ಲಿ ಸಮಸ್ಯೆ:
ಗ್ರಾಹಕನಿಗೆ ಪರಿಹಾರ ನೀಡುವಂತೆ ಗ್ರಾಹಕರ ನ್ಯಾಯಾಲಯ ಆದೇಶ

0
62321159.jpg

ಬಂಟ್ವಾಳ: ಮೊಡಂಕಾಪಿನ ಕಲ್ಪವೃಕ್ಷ ಟ್ರೇಡರ್ಸ್ ಮಾಲಕರಾದ ಸುಂದರ ಕುಲಾಲ್ ರವರು ವಿನಿಟೆಕ್ ಸಿಸ್ಟಮ್ಸ್ ಉಡುಪಿ ಅವರಿಂದ ಎಸ್ಸೆ ಕಂಪನಿ ಬೆಂಗಳೂರು (ESSAE DIGITRONICS PRIVATE LIMITED) ಇವರಿಂದ ತಯಾರಿಸಲ್ಪಟ್ಟ ವಾಹನಗಳನ್ನು ತೂಗುವ ಯಂತ್ರವನ್ನು ಖರೀದಿಸಿದ್ದರು.

ತೂಕದ ಯಂತ್ರದಲ್ಲಿ ತಯಾರಿಕೆಯ ನಂತರದಲ್ಲಿ ಆದಂತಹ ತೊಂದರೆಗಳ ಬಗ್ಗೆ ಸುಂದರ ಕುಲಾಲ್ ಕಂಪನಿಗೆ ಮತ್ತು ವಿತರಕರಿಗೆ ನೋಟೀಸ್ ನೀಡಿ ಪರಿಹಾರ ನೀಡುವಂತೆ ಕೇಳಿದ್ದರು. ಈ‌ ಬಗ್ಗೆ ಮುತುವರ್ಜಿ ವಹಿಸದ ವಿತರಕರು ಮತ್ತು ಯಂತ್ರದ ತಯಾರಿಕ ಸಂಸ್ಥೆಯ ವಿರುದ್ಧ ಸುಂದರ ಕುಲಾಲ್ ರವರು ಮಂಗಳೂರಿನ ಗ್ರಾಹಕರ ನ್ಯಾಯಾಲಯದಲ್ಲಿ ವಿತರಕ ಸಂಸ್ಥೆ ವಿನಿಟೆಕ್ ಸಿಸ್ಟಮ್ಸ್ ಮತ್ತು ತಯಾರಿಕ ಸಂಸ್ಥೆ ಎಸ್ಸೆ ಕಂಪನಿಯವರು ಜತೆಯಾಗಿ ಸುಂದರ ಕುಲಾಲ್ ರವರಿಗೆ ಯಂತ್ರದ ಒಟ್ಟು ವೆಚ್ಚ ರೂ. 6,19,500 ನ್ನು ಶೇಕಡ 7% ದರದ ಬಡ್ಡಿ ಸಹಿತ ಹಿಂತಿರುಗಿಸುವಂತೆ ಮತ್ತು ನ್ಯಾಯಲಯದ ವೆಚ್ಚ ರೂ.15000 ಪರಿಹಾರ ಮೊತ್ತ ರೂ.10000 ವನ್ನು ದೂರುದಾರ ಸುಂದರ ಕುಲಾಲ್ ರವರಿಗೆ ನೀಡುವಂತೆ ಆದೇಶಿಸಿರುತ್ತದೆ.

ದೂರುದಾರ ಸುಂದರ ಕುಲಾಲ್ ರವರ ಪರವಾಗಿ ವಿಟ್ಲದ ನ್ಯಾಯವಾದಿ ಎ.ಮೋಹನ ರವರು ಗ್ರಾಹಕರ ನ್ಯಾಯಾಲಯದಲ್ಲಿ ವಾದಿಸಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!