March 18, 2026

ತಲೆ ಮೇಲೆ ಕಲ್ಲು ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ

0
image_editor_output_image2041707227-1703053144962.jpg

ಹುಣಸೂರು: ಅಪರಿಚಿತ ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ನಗರದ ಅರಸು ಪುತ್ಥಳಿ ಎದುರಿನ ಬಾಹುಸಾರ್ ಪ್ಯಾರಾ ಮೆಡಿಕಲ್ಸ್ ಗೆ ತೆರಳುವ ರಸ್ತೆಯ ಸಿಮೆಂಟ್ ಬ್ರಿಕ್ಸ್ ಪಕ್ಕದಲ್ಲಿ ನಡೆದಿದೆ.

ಮುಂಜಾನೆ ದಾರಿ ಹೋಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದಿದ್ದು, ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.

ಸ್ಥಳಕ್ಕೆ ಡಿವೈಎಸ್ ಪಿ ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಮಾಹಿತಿ ಇದ್ದವರು ನಗರ ಠಾಣೆ ಸಂಪರ್ಕಿಸುವಂತೆ ಇನ್ಸ್ ಪೆಕ್ಟರ್ ದೇವೇಂದ್ರ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!