March 19, 2026

ಬಂಟ್ವಾಳ: ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಕರುವನ್ನು ತಿಂದ ಚಿರತೆ

0
image_editor_output_image-821179428-1703050901571.jpg

ಬಂಟ್ವಾಳ: ಹಟ್ಟಿಯ ಹೊರಗಡೆ ಕಟ್ಟಿ ಹಾಕಿದ್ದ ಸಣ್ಣ ಕರುವೊಂದನ್ನು ಚಿರತೆ ಕೊಂದು ತಿಂದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈನಾಡು ಎಂಬಲ್ಲಿ ಇಂದು ನಡೆದಿದೆ.

ನೈನಾಡು ವಿಠಲ ಶೆಟ್ಟಿ ಎಂಬವರ ಮನೆಯ ಸುಮಾರು 6 ತಿಂಗಳು ಕರುವನ್ನು ಚಿರತೆ ಕೊಂದು ಅರ್ಧ ತಿಂದು ಹಾಕಿದೆ. ಮನೆಯ ಸಮೀಪದಲ್ಲಿರುವ ಹಟ್ಟಿಯ ಹೊರಗಡೆ ಈ ಒಂದು ಕರುವನ್ನು ಕಟ್ಟಿಹಾಕಲಾಗಿತ್ತು. ಮಧ್ಯರಾತ್ರಿ ವೇಳೆ ಚಿರತೆ ಕರುವನ್ನು ಕೊಂಡುಹೋಗಿರಬಹುದು ಎಂದು ಶಂಕಿಸಲಾಗಿದೆ.

ನಾಯಿಗಳು ಬೊಗಳಿದೆಯಾದರು ಚಿರತೆ ಬಂದು ಈ ತರಹ ಮಾಡಬಹುದು ಎಂಬುದು ತಿಳಿದಿರಲಿಲ್ಲ ಎಂದು ಮನೆಯವರು ಹೇಳುತ್ತಾರೆ‌. ಯಾಕೆಂದರೆ ಈವರೆಗೆ ಪರಿಸರದಲ್ಲಿ ಚಿರತೆ ದಾಳಿ ಬಗ್ಗೆ ತಿಳಿದಿಲ್ಲ. ಹಾಗಾಗಿ ನಾಯಿಗಳು ಅಷ್ಟು ಜೋರಾಗಿ ಬೊಗಳಿದರೂ ಇಂತಹ ಯೋಚನೆ ಬಂದಿರಲಿಲ್ಲ. ಹಟ್ಟಿಯಿಂದ ಸುಮಾರು 50 ಮೀ.ದೂರದ ಅಡಿಕೆ ತೋಟಕ್ಕೆ ಕರುವನ್ನು ಎಳೆದುಕೊಂಡು ಹೋಗಿ ಕೊಂದು‌‌ ಬಳಿಕ ತಿಂದಿದೆ.

Leave a Reply

Your email address will not be published. Required fields are marked *

error: Content is protected !!