March 18, 2026

ಬೆಳ್ತಂಗಡಿ: ಪತ್ನಿಯ ಕಣ್ಣು, ಕೆನ್ನೆಯನ್ನು ಕಚ್ಚಿ ಮಾಂಸ ಹೊರ ತೆಗೆದ ಭೂಪ ಪತಿ

0
image_editor_output_image1016150866-1702995651197

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಯ ಕಣ್ಣು ಹಾಗು ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದ ಅಮಾನವೀಯ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲದಲ್ಲಿ ಡಿ .18ರಂದು ನಡೆದಿದೆ.

ಶಿಶಿಲ ಕೋಟೆಬಾಗಿಲು ನಿವಾಸಿ ಸುರೇಶ್ ಗೌಡ ಹಲ್ಲೆಗೈದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ 12.45ರ ವೇಳೆಗೆ ಪತಿ ಸುರೇಶ್ ಗೌಡ ಕುಡಿದ ಮತ್ತಿನಲ್ಲಿ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪತ್ನಿಗೆ ಕೋಲಿನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ, ಬಳಿಕ ಆಕೆಯ ಕಣ್ಣು ಹಾಗು ಕೆನ್ನೆಯನ್ನ ಕಚ್ಚಿ ಮಾಂಸ ಹೊರ ತೆಗೆದಿದ್ದಾನೆ. ಈ ವೇಳೆ ಬಿಡಿಸಲು ಹೋದ ಮಗಳ ಮೇಲೂ ಆತ ತಲೆ ಹಾಗೂ ಕಣ್ಣಿಗೆ ಹೊಡೆದು ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಗಳು ತಂದೆಯಿಂದ ತಪ್ಪಿಸಿ ನೆರೆಹೊರೆಯವರ ಮನೆಗೆ ಓಡಿ ಹೋಗಿ ವಿಚಾರ ತಿಳಿಸಿದ್ದಾಳೆ. ಕೂಡಲೇ ನೆರೆಹೊರೆಯವರು ಬಂದಾಗ ಆರೋಪಿ ತೊಟದೊಳಗೆ ಓಡಿ ತಪ್ಪಿಸಿಕೊಂಡಿದ್ದಾನೆ. ಆದರೆ ಪತ್ನಿಯನ್ನು ಇಂದು ಬೆಳಗ್ಗೆ ನೋಡಿದಾಗ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು. ಇದರಿಂದ ಪತ್ನಿಯ ಕಣ್ಣು ಹಾಗೂ ಮುಖದ ಭಾಗಕ್ಕೆ ಕಚ್ಚಿದ ಕಾರಣ ಮುಖದ ಮಾಂಸ ಹೊರ ಬಂದಿದೆ. ಎಡ ಕಣ್ಣಿಗೆ ಸಂಪೂರ್ಣ ಹಾನಿ ಆಗಿದೆ. ವಿಪರೀತ ಗಾಯಗೊಂಡ ತಾಯಿ ಮಗಳಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!