February 4, 2026

ಬಂಟ್ವಾಳ: ಮೂರು ಮಕ್ಕಳ ತಾಯಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ:
ಆರೋಪಿ ವಿರುದ್ದ ಕೇಸು ದಾಖಲು

0
IMG-20231215-WA0023.jpg

ಬಂಟ್ವಾಳ: ಮೂರು ಮಕ್ಕಳ ತಾಯಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ಅ ಬಳಿಕ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಕೊನೆಗೆ ಕೊಲ್ಲುವ ಬೆದರಿಕೆ ಹಾಕಿದ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೊರೆಟ್ಟೊ ನಿವಾಸಿ ಅಬ್ದುಲ್ ಅಜೀಜ್ ಅವರ ಪತ್ನಿ  ಅನೀಶಾ ಬಾನು ಅವರ‌ ಮೇಲೆ ನರಿಕೊಂಬು ನಿವಾಸಿ ತಸ್ಲೀಂ ಆರೀಫ ಎಂಬಾತ ಅತ್ಯಾಚಾರ ಎಸಗಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿರುವ ಆರೋಪಿಯಾಗಿದ್ದಾನೆ.

ಸ್ನೇಹಿತನೆಂದು ಮನೆಗೆ ಕರೆದುಕೊಂಡು ಹೋದದ್ದೇ ತಪ್ಪಾಯಿತಾ? ಮನೆಗೆ ಬರುತ್ತಿದ್ದ ಸ್ನೇಹಿತ ಹೆಂಡತಿಯನ್ನೇ ಯಾಮಾರಿಸಿ ಬಿಟ್ಟ. ಸ್ನೇಹಿತನ ಪತ್ನಿಯನ್ನೇ ಲಪಟಾಯಿಸಿದ ಘಟನೆ ನಡೆದು ಇದೀಗ ಗಂಡನ ಬಿಟ್ಟು ಹೋದ ಪತ್ನಿಗೆ ಅತ್ತ ಗಂಡನು ಇಲ್ಲ, ಇತ್ತ ಆಸೆ ತೋರಿಸಿದ ಶೋಕಿ ಗಿರಾಕಿಯೂ ಇಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ.

ಅನೀಶಾ ಬಾನು ಅವರ ಗಂಡನ ಸ್ನೇಹಿತನಾದ ನರಿಕೊಂಬು ನಿವಾಸಿ ತಸ್ಲೀಂ ಆರೀಫ ಗಂಡನ ಜೊತೆ ಮನೆಗೆ ಬರುತ್ತಿದ್ದು, ಸಲುಗೆ ಉಂಟಾಗಿ ಮೊಬೈಲ್ ನಂಬ್ರ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ, ಹಲವಾರು ಬಾರಿ ಮತ್ತೆ ಮತ್ತೆ ಸುಳ್ಳು ಹೇಳಿ ದೈಹಿಕ ಸಂರ್ಪಕ ನಡೆಸಿದ‌.

ಇವರಿಬ್ಬರ ನಡುವಿನ ಪ್ರೇಮ ಪ್ರಕರಣ ಮತ್ತು ದೈಹಿಕ ಸಂಪರ್ಕದ ವಿಚಾರ ಗಂಡನಿಗೆ ಗೊತ್ತಾಗಿ ಅವಳಿಂದ ದೂರ ಇದ್ದ. ನಂತರ ಆರೋಪಿಯೊಂದಿಗೆ ಆಯಿಶಾ ಬಾನು ಬಾಡಿಗೆ ಮನೆಯಲ್ಲಿ ವಾಸವಾಗಿದ್ಧಳು.

3 ತಿಂಗಳ ಹಿಂದೆ ಆರೋಪಿ ತಸ್ಲೀಂ ಇಟ್ಟುಕೊಂಡವಳನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ.

ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಆನೀಶಾ ಬಾನು ಮುಖಕ್ಕೆ, ಬಾಯಿಗೆ ಕೈಯಿಂದ ಹೊಡೆದು, ಬಲಕಾಲಿನಿಂದ ಎಡ ಸೊಂಟಕ್ಕೆ ಒದ್ದಿರುವುದಲ್ಲದೆ, ತಲೆ ಕೂದಲನ್ನು ಕೈಯಿಂದ ಎಳೆದು ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಮನೆಯಿಂದ ಹೊರಟು ಹೋಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!