ಸುಳ್ಯ: ಮೀನು ಮಾರಾಟದ ದ್ವಿಚಕ್ರ ವಾಹನ ಸ್ಕಿಡ್:
ಸವಾರನಿಗೆ ಗಾಯ
ಸುಳ್ಯ: ಬೆಟ್ಟಂಪಾಡಿ ನಿವಾಸಿ ಜಬ್ಬಾರ್ ಎಂಬ ಯುವಕ ಕಳೆದ ಒಂದು ತಿಂಗಳಿನಿಂದ ಸುಳ್ಯ ಭಾಗದಲ್ಲಿ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದು, ಇಂದು ಸಂಜೆ ವೇಳೆ ದುಗ್ಗಲಡ್ಕ ಪರಿಸರದಿಂದ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭ ಗೊಂಟಡ್ಕ ತಿರುವಿನಲ್ಲಿ ತಾನು ಬರುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಸವಾರನಿಗೆ ಗಾಯಗಳಾದ ಘಟನೆ ವರದಿಯಾಗಿದೆ.
ಘಟನೆಯಿಂದ ಜಬ್ಬಾರ್ ರವರ ತಲೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿ ರಸ್ತೆಯಲ್ಲಿ ಬಿದ್ದಿದ್ದರು. ಅದೇ ರಸ್ತೆಯಲ್ಲಿ ವ್ಯಾನ್ ನಲ್ಲಿ ಬರುತ್ತಿದ್ದ ಹರಿಪ್ರಸಾದ್ ನಾರ್ಣಕಜೆ ಎಂಬವರು ಗಾಯಗೊಂಡ ಬೈಕ್ ಸವಾರರನ್ನು ತಕ್ಷಣ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು ಎಂದು ತಿಳಿದುಬಂದಿದೆ.





