December 19, 2025

ರಾಜ್ಯ ಸರ್ಕಾರದ ಒಮಿಕ್ರಾನ್ ಮಾರ್ಗಸೂಚಿ ಪ್ರಕಟ:
ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಯಾವುದೇ ಸಮಾರಂಭ ನಿಷೇಧ,  ಮದುವೆಗೆ 500 ಮಂದಿಗೆ ಮಾತ್ರ ಅವಕಾಶ: ವಿದ್ಯಾರ್ಥಿಗಳ ಪೋಷಕರು ಎರಡು ಡೋಸ್ ಲಸಿಕೆ ಕಡ್ಡಾಯ

0
r-ashoka-991888-1622405168

ಬೆಂಗಳೂರು: ಎರಡು ಡೋಸ್‌ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಶಾಲೆಗಳಿಗೆ ತಮ್ಮ ಮಕ್ಕಳನ್ನು ಬಿಡುವುದಕ್ಕೆ ಸೇರಿದಂತೆ ಸಿನಿಮಾ. ಮಾಲ್‌ಗಳಿಗೆ ಹೋಗುವವರಿಗೆ ಅವಕಾಶ ನೀಡಲಾಗುವುದು ಅಂತ ಸಚಿವ ಆರ್‌.ಆಶೋಕ್‌ ಅವರು ಹೇಳಿದ್ದಾರೆ.

ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಯಾವುದೇ ಸಮಾರಂಭ ಮಾಡದಂತೆ ಅದೇಶ, ಮದುವೆಗೆ 500 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು. ದಿನಕ್ಕೆ ಇನ್ನೂ ಮುಂದೆ 1 ಲ ಕರೋನ ಟೆಸ್ಟ್ ಮಾಡಲು ಸೂಚನೆ ಮಾಡಲಾಗಿದೆ. ಅಕ್ಸಿಜನ್‌ ಬೆಡ್‌ಗಳನ್ನು ಹೆಚ್ಚಳ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದ್ದು, ಮತ್ತೆ ಕಂಟ್ರೋಲ್‌ ರೂಮ್ ಶುರು ಮಾಡಲು ಅನುಮತಿ ನೀಡಲಾಗಿದ್ದು, ಇದಲ್ಲದೇ ಮೆಡಿಸನ್ ಸಮಸ್ಯೆ ನೀಗಿಸಲು ಎಲ್ಲಾ ರೀತಿಯಲ್ಲಿ ಸಿದ್ದತೆ ನಡೆಸಲಾಗುವುದು ಅಂತ ಸಚಿವ ಆರ್‌ ಆಶೋಕ್‌ ಅವರು ತಿಳಿಸಿದ್ದಾರೆ.

ಅವರು ಇಂದು ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಒಮಿಕ್ರಾನ್ ತಡೆಗೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿದರು.

ಸಭೆ ಬಳಿಕ ಸಚಿವ ಆರ್‌.ಆಶೋಕ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ, ಒಮಿಕ್ರಾನ್ ಸೋಂಕು ಬೆಂಗಳೂರಿನಲ್ಲಿ ಕಂಡು ಬಂದಿರುವುದರಿಂದ ಇಂದು ನಡೆದ ಸಭೆಯಲ್ಲಿ ಹಲವು ಬಗ್ಗೆ ವಿಷಯಗಳ ಚರ್ಚೆನಡೆಸಲಾಗಿತ್ತು. ಇನ್ನೂ ಈ ಒಮಿಕ್ರಾನ್ ಪ್ರಾಥಮಿಕ ಮೂಲಗಳ ಪ್ರಕಾರ, ಅನಾಪೌಚಾರಿಕವಾಗಿ ಹೆಚ್ಚು ಪರಿಣಾಮ ಬೀರುವುದಿಲ್ಲ ಅನ್ನೊಂದು ತಿಳಿದು ಬಂದಿದೆ.

ಈ ನಡುವೆ ಕೇಂದ್ರ ಸರ್ಕಾರದಿಂದ ಒಮಿಕ್ರಾನ್ ಸೋಂಕು ಬಗ್ಗೆ ಮಾಹಿತಿ ಕೇಳಲಾಗಿದೆ. ವಿದೇಶದಿಂದ ನಗರಕ್ಕೆ ಬರುವವರನ್ನು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ ಅಂಥ ತಿಳಿಸಿದರು.ಲ್ಯಾಬ್‌ಗಳಲ್ಲಿ ಅಕ್ರಮವಾದ್ರೆ ತನಿಖೆ ಆದ್ರೇ ಈ ಬಗ್ಗೆ ತನಿಖೆ ನಡೆಸಲಾಗುವುದು ಅಂತ ಅವರು ತಿಳಿಸಿದ ಅವರು ಎರ್‌ಪೋರ್ಟ್‌ನಲ್ಲಿ ಆರ್‌ಟಿಪಿಸಿಆರ್ ಟೆಸ್ಟ್‌ ನಡೆಸಲಾಗುವುದಕ್ಕೆ ಸಂಬಂಧಪಟ್ಟಂತೆ ಇಲ್ಲಿಗೆ ಬರುವವರು ತಮ್ಮ ಜಾಗದಿಂದಲೇ ಟೆಸ್ಟ್ ಬುಕ್ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದಲ್ಲದೇ ಕೋವಿಡ್‌ ನೆಗೆಟಿವ್ ಬಂದವರು ಮನೆಗೆ ಹೋಗಬಹುದು ಅಂತ ಹೇಳಿದರು. ಇನ್ನೂ ಇದೇ ವೇಳೇ ಅವರು ಮಾತನಾಡಿ ಎಂದಿನಂತೆ, ಬೆಳಗಾವಿಯಲ್ಲಿ ಅಧಿವೇಶನ ನಡೆಸಲಾಗುವುದು ಅಂತ ಹೇಳಿದರು. ಇನ್ನೂ ಎಂಎಲ್‌ಸಿ ಚುನಾವಣೆಗೆ ಸಂಬಂಧಪಟ್ಟಂತೆ ಜನ ಸೇರುವುದಕ್ಕೆ ಯಾವುದೇ ವಿವರಣೆಯನ್ನು ನೀಡಲಿಲ್ಲ, ಸಹಜವಾಗಿ ರಾಜಕೀಯ ನಾಯಕರು ಇದ್ದ ವೇಳೆಯಲ್ಲಿ ಹೆಚ್ಚಿನ ಜನ ಸೇರುತ್ತಾರೆ, ಇದಲ್ಲದೇ ಇದರಿಂದ ಕರೋನ ಸೋಂಕು ಹೆಚ್ಚಳವಾಗುವುದರಲ್ಲಿ ಸಂಶವಿಲ್ಲ ಎಂದರು.

Leave a Reply

Your email address will not be published. Required fields are marked *

You may have missed

error: Content is protected !!