March 18, 2026

ಬಂಟ್ವಾಳ: ಸರಪಾಡಿ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಬಂಟ್ವಾಳ ಪೊಲೀಸರ ದಾಳಿ

0
image_editor_output_image2063345849-1702024423696

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸರು ದಾಳಿ ನಡೆಸಿ, ರಾಶಿ ಹಾಕಿದ ಮರಳನ್ನು ವಶಪಡಿಸಿಕೊಂಡ ಘಟನೆ ಸರಪಾಡಿ ಎಂಬಲ್ಲಿ ಇಂದು ಮುಂಜಾನೆ 3 ಗಂಟೆ ವೇಳೆಗೆ ನಡೆದಿದೆ.ಸರಪಾಡಿ ಗ್ರಾಮದ ಬಿಯಪಾದೆ ಮೊಗರೋಡಿ ನೀರಿನ‌ ಟ್ಯಾಂಕ್ ಬಳಿ ನೇತ್ರಾವತಿ ನದಿಯಲ್ಲಿ ಮರಳು ತೆಗೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಪೋಲೀಸರು ದಾಳಿ ನಡೆಸಿದಾಗ ನದಿಯಿಂದ ಬುಟ್ಟಿಯಲ್ಲಿ ಮರಳು ತೆಗೆಯುತ್ತಿದ್ದ ನೌಶಾದ್, ಜುಬೇರ್,ಸಂತೋಷ್ ಮತ್ತು ಸಂದೀಪ್ ಎಂಬವರು ಓಡಿ ಹೋಗಿದ್ದಾರೆ.

ಆರೋಪಿಗಳು ಅಕ್ರಮವಾಗಿ ಮರಳು ತೆಗೆಯುತ್ತಿದ್ದು, ಒಂದು ಪಿಕಪ್ ಲೋಡಿನಷ್ಟು ಮರಳನ್ನು ರಾಶಿ ಹಾಕಿದ್ದರು.
ವಶಪಡಿಸಿಕೊಂಡ ಮರಳಿನ ಮೌಲ್ಯ ರೂ.2 ಸಾವಿರ ಎಂದು ಅಂದಾಜಿಸಲಾಗಿದ್ದು, ಅಕ್ರಮ ಮರಳು ತೆಗೆಯುತ್ತಿದ್ದ ಆರೋಪಿಗಳ ಮೇಲೆ ಕಲಂ 379 ರಂತೆ ಕಳವು ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!