May 9, 2026

ವಳಚ್ಚಿಲ್: ಪೈಂಟಿಂಗ್ ಕೆಲಸ ಮಾಡುತ್ತಿದ್ದಾಗ ಏಣಿ ಮೂಲಕ ವಿದ್ಯುತ್ ಪ್ರವಹಿಸಿ ಯುವಕ ಮೃತ್ಯು:

0
image_editor_output_image1139989334-1701880088115

ಮಂಗಳೂರು: ಏಣಿ ಮೂಲಕ ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಪುವಿನಲ್ಲಿ ಸಂಭವಿಸಿದೆ.

ನಗರದ ಹೊರವಲಯದ ವಳಚ್ಚಿಲ್ ಪದವು ನಿವಾಸಿ ಜೈನುದ್ದೀನ್‌ ಅಬ್ದುಲ್‌ ರೆಹಮಾನ್‌ (43) ಮೃತಪಟ್ಟವರು.

ಹೆನ್ರಿ ಡಿ’ಸೋಜಾ ಎಂಬವರ ಮನೆಯಲ್ಲಿ ಮೇಲ್ಚಾವಣಿ ಬಳಿ ಕಬ್ಬಿಣದ ಏಣಿ ಮೇಲೆ ನಿಂತು ಪೈಂಟಿಂಗ್ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹೈಟೆನ್ಶನ್‌ ವೈರ್‌ ತಾಗಿ ವಿದ್ಯುತ್‌ ಪ್ರವಹಿಸಿ ಕೆಳಗೆ ಕುಸಿದು ಬಿದ್ದರು. ಅವರ ಜತೆ ಕೆಲಸ ಮಾಡುತ್ತಿದ್ದ ರಾಜೇಶ್‌ ಮತ್ತು ಬಾಲಕೃಷ್ಣ ಅವರು ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಮೃತ ರೆಹಮಾನ್‌ ಅವರು ಪತ್ನಿ, ಓರ್ವ ಮಗಳನ್ನು ಅಗಲಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!