February 4, 2026

ಶಿವಮೊಗ್ಗ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ವ್ಯಕ್ತಿಯ ಕೊಲೆ

0
image_editor_output_image3317411-1701652128964.jpg

ಶಿವಮೊಗ್ಗ: ಬೈಕ್‍ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಆತನ ಅಣ್ಣ ಹಾಗೂ ಮಗ ಸೇರಿಕೊಂಡು ಅಡ್ಡಗಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಘಟನೆ ಬೆಳಲಕಟ್ಟೆ ಗ್ರಾಮದಲ್ಲಿ ನಡೆದಿದೆ.

ಹತ್ಯೆಗೀಡಾದ ವ್ಯಕ್ತಿಯನ್ನು ಅದೇ ಗ್ರಾಮದ ಮಹೇಶಪ್ಪ (60) ಎಂದು ಗುರುತಿಸಲಾಗಿದೆ. ಆತ ಬೆಳಲಕಟ್ಟೆಯಿಂದ ಬಿಕ್ಕೋನಹಳ್ಳಿಯ ತನ್ನ ಮಗಳ ಮನೆಗೆ ಹೋಗುತ್ತಿದ್ದ.

ಈ ವೇಳೆ ಆತನನ್ನು ಅಡ್ಡ ಹಾಕಿದ ಸಹೋದರ ಕುಮಾರ್ ಹಾಗೂ ಆತನ ಮಗ ಕಾರ್ತಿಕ್ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಗಾಯಗೊಂಡು ನೆಲದ ಮೇಲೆ ನರಳಾಡುತ್ತಿದ್ದ ಮಹೇಶಪ್ಪನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ. ಮಹೇಶಪ್ಪನ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!