December 22, 2024

ಪಾರ್ಟ್ಟೈಮ್ ಜಾಬ್ ಕೊಡಿಸುವುದಾಗಿ ಹಣ ಪಡೆದು ವಂಚನೆ: ನಾಲ್ವರು ಸೈಬರ್ ವಂಚಕರ ಬಂಧನ

0

ಬೆಂಗಳೂರು: ಪಾರ್ಟ್ಟೈಮ್ ಜಾಬ್ ಕೊಡಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ಹಂತ ಹಂತವಾಗಿ ಹಣ ಪಡೆದು ವಂಚಿಸುತ್ತಿದ್ದ ಜಾಲ ಬೇಧಿಸಿರುವ ನಗರದ ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ನಾಲ್ವರು ಸೈಬರ್ ವಂಚಕರನ್ನು ಬಂಧಿಸಿದ್ದಾರೆ.

ಸೈಯದ್ ಯೂನಸ್, ಮೊಹಮ್ಮದ್ ಕಲೀಮುಲ್ಲಾ, ಸೈಯ್ಯದ್ ಅರ್ಬಾಜ್ ಹಾಗೂ ಇಬ್ರಾಹಿಂ ಕಲೀಂ ಬಂಧಿತ ಆರೋಪಿಗಳು.

ವಂಚನೆಗೊಳಗಾದ ಸಾವಂತ್ ಪೂಜಾರಿ ಎಂಬುವರು ಫೇಸ್ಬುಕ್ ನೋಡುವಾಗ ಆನ್ಲೈನ್ ಶಾಪಿಂಗ್ ಆ್ಯಪ್ವೊಂದರಲ್ಲಿ ಪಾರ್ಟ್ ಟೈಮ್ ವರ್ಕ್ ಫ್ರಂ ಹೋಮ್ ಕೆಲಸ ಇರುವುದನ್ನು ಗಮನಿಸಿ ಲಿಂಕ್ ಒತ್ತಿದ್ದರು.

 

 

ಯೂಸರ್ ಐಡಿ, ಪಾರ್ಸ್ ವರ್ಡ್ ರಚಿಸಿಕೊಂಡಿದ್ದಕ್ಕೆ ಅವರಿಗೆ ಬೋನಸ್ ರೂಪದಲ್ಲಿ 100 ರೂ. ಆರೋಪಿಗಳು ಕಳುಹಿಸಿದ್ದರು. ಬಳಿಕ ಟೆಲಿಗ್ರಾಮ್ ಗ್ರೂಪ್ ರಚಿಸಿ ಫ್ಲಿಪ್ ಕಾರ್ಟ್ ಮಾಲ್ ಇಂಡಿಯಾದಲ್ಲಿ ಪ್ರಾಡಕ್ಟ್ ಖರೀದಿಸುವಂತೆ ವಿವಿಧ ಟಾಸ್ಕ್ ನೀಡಿದ್ದರು.

ಅದೇ ರೀತಿ, 88 ಸಾವಿರ ರೂಪಾಯಿ ಮೌಲ್ಯ ವಸ್ತುಗಳ ಖರೀದಿಗೆ ಪ್ರತಿಯಾಗಿ ಯಾವುದೇ ಹೆಚ್ಚುವರಿ ಹಣ ನೀಡದೇ ಆರೋಪಿಗಳು ವಂಚಿಸಿದ್ದರು.

Leave a Reply

Your email address will not be published. Required fields are marked *

error: Content is protected !!