March 18, 2026

ಕಾರ್ಕಳ: ಬಸ್ ಮತ್ತು ಬೈಕ್ ನಡುವೆ ಅಪಘಾತ: ಓರ್ವ ಮೃತ್ಯು, ಸಹ ಸವಾರ ಗಂಭೀರ

0
IMG-20231127-WA0050.jpg

ಕಾರ್ಕಳ: ಬೈಲೂರಿನಲ್ಲಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಪಳ್ಳಿ ಕೋಕೈಕಲ್ಲು ನಿವಾಸಿ ನಾಗರಾಜ್ (20) ಮೃತ ಯುವಕನಾಗಿದ್ದು, ಮಂಜು ಗಂಭೀರ ಗಾಯಗೊಂಡ ಸಹ ಸವಾರ.

ಕಾರ್ಕಳ ತಾಲೂಕಿನ ಬೈಲೂರು ಗ್ರಾಮದ ಯರ್ಲಪಾಡಿ – ಗೋವಿಂದೂರು ಕಡೆಯಿಂದ ಬರುತ್ತಿದ್ದ ಬಸ್‌ ಮತ್ತು ಬೈಲೂರು ಹೈಸ್ಕೂಲ್ ಬಳಿಯ ತಿರುವಿನಲ್ಲಿ ಕಾರ್ಕಳದೆಡೆಗೆ ಸಾಗುವ ಬೈಕ್ ಢಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಸವಾರ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!