ವಿಶ್ವಕಪ್‌ನಲ್ಲಿ ಸೋತ ಭಾರತ, ಮಾತು ಉಳಿಸಿಕೊಂಡು ತಲೆ ಬೋಳಿಸಿಕೊಂಡ ಶಿಕ್ಷಕಿ..!
ಎರ್ನಾಕುಳಂ : ಒಂದು ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳುವವರು ಕೆಲವೇ ಕೆಲವು ಮಂದಿ ಅದರಲ್ಲೂ ಚಾಲೆಂಜ್ ಹಾಕಿದ್ರೆ ಅದನ್ನು ನಿಭಾಯಿಸುವುದು ಕೂಡ ತ್ರಾಸದಾಯಕ.
ಆದ್ರೆ ಇಲ್ಲೊಬ್ಬ ಶಿಕ್ಷಕಿ ಚಾಲೆಂಜ್‌ನಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಕೇರಳದ ಎರ್ನಾಕುಲಂ ಎರೂರ್ ಮರಮ್ಕುಲಂಗರ ಮೂಲದ ಗ್ರೀಷ್ಮಾ ವಿಶ್ವಕಪ್ ನಲ್ಲಿ ಭಾರತ ಸೋತರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಚಾಲೆಂಜ್ ಹಾಕಿದ್ರು. ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತ ಸೋತರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂಬುದು ಗ್ರೀಷ್ಮಾ ಅವರ ಪಣತೊಟ್ಟಿದ್ದರು ಆದ್ರೆ ಪಣದಲ್ಲಿ ಮಿಳೆ ಗೆದ್ದಳು. ಭಾರತ ಪಂದ್ಯ ಸೋತಾಗ ಮಹಿಳೆ ತಾನು ಹೇಳಿದಂತೆ ಮಾಡಿದ್ದಾರೆ. ಗ್ರೀಷ್ಮಾ ಅವರು 13 ವರ್ಷಗಳಿಂದ ಎರೂರು ಮರಮಕುಳಂಗರ ದೇವಸ್ಥಾನದ ಬಳಿ ಟ್ಯೂಷನ್ ಸೆಂಟರ್ ನಡೆಸುತ್ತಿದ್ದಾರೆ. ‘ಭಾನುವಾರ ಭಾರತ ಸೋತರೆ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಯುವತಿ ಪೂರ್ಣಾ ಎಂಬ ಟ್ಯೂಷನ್ ಸೆಂಟರ್ ನಲ್ಲಿ ವಿದ್ಯಾರ್ಥಿನಿಯರ ಮುಂದೆ ಪಣತೊಟ್ಟಿದ್ದರು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿತು. ಆದ್ರೆ ಗ್ರೀಷ್ಮಾ ಕೊಟ್ಟ ಮಾತನ್ನು ಉಳಿಸಿಕೊಂಡರು. ಕೇಶರಾಶಿಯಿಂದ ಕೂಡಿದ್ದ ತಲೆಯನ್ನು ನುಣ್ಣಗೆ ಬೋಳಿಸಿ ಮಾತು ಉಳಿಕೊಂಡಿದ್ದಾರೆ. .