ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರು ಆರೋಗ್ಯ ವಿಚಾರಿಸಿದ ನಳಿನ್ ಕುಮಾರ್ ಕಟೀಲು
ಪುತ್ತೂರು: ವಿಷಪೂರಿತ ಹಾವು ಕಚ್ಚಿದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಶಾಸಕ ಸಂಜೀವ ಮಠಂದೂರು ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ಮಾಡಿದರು.
ಹಿರೇಬಂಡಾಡಿಯಲ್ಲಿ ಮನೆ ಬಳಿಯ ತೋಟಕ್ಕೆ ಹೋದ ವೇಳೆ ಅವರಿಗೆ ವಿಷಪೂರಿತ ಕಟ್ಟು ಹಾವು (ಕ್ರೈಟ್) ಕಡಿದಿತ್ತು. ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರಿನ ಮಹಾವೀರ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಜೀವ ಮಠಂದೂರು ಅವರನ್ನು ಭೇಟಿ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಆರೋಗ್ಯ ವಿಚಾರಿಸಿದರು.