ಉಡುಪಿ: ನಾಲ್ವರ ಹತ್ಯೆ ಪ್ರಕರಣ: ಹಿಂದು ಮಂತ್ರ ಹೆಸರಿನ ಪೇಜಿನಲ್ಲಿ ಕೊಲೆಯನ್ನು ಸಂಭ್ರಮಿಸಿ ಪೋಸ್ಟ್
ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಂಬಂಧಿಸಿ ಹಿಂದು ಮಂತ್ರ ಹೆಸರಿನ ಪೇಜಿನಲ್ಲಿ ಕೊಲೆಯನ್ನು ಸಂಭ್ರಮಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶ ಹರಿಬಿಟ್ಟು ಆತಂಕ ಸೃಷ್ಟಿಸಿದ್ದಾರೆ.
ನ.12ರಂದು ನಡೆದ ಮುಸ್ಲಿಂ ಕುಟುಂಬದ ನಾಲ್ವರ ಭೀಕರ ಕೊಲೆಗಳಿಗೆ ಜಾತಿಬೇಧ ಮರೆತು ಎಲ್ಲರೂ ಮರುಗುತ್ತಿರುವಾಗ ಹಿಂದು ಮಂತ್ರ ಪೇಜ್ ಒಂದು ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ದ್ವೇಷ ಹರಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ಯ ಸರ್ಕಾರದ ಸಚಿವರು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಾರೆಯೇ ವಿನಃ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ದ್ವೇಷಾಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ನಡುವೆಯೇ ಕೊಲೆಯನ್ನು ಸಂಭ್ರಮಿಸಿ ಪೋಸ್ಟ್ ಹಾಕಲಾಗಿದೆ.