ಮಂಗಳೂರು: ಬೀದಿ ನಾಯಿಗಳ ಉಪಚಾರ ಮಾಡುವ ರಜನಿ ಶೆಟ್ಟಿ ಪ್ರಶಂಸಿದ ಕ್ರಿಕೆಟರ್ ವಿ.ವಿ.ಎಸ್ ಲಕ್ಷ್ಮಣ್

ಮಂಗಳೂರು: ಬೀದಿ ನಾಯಿಗಳಿಗೆ ಪ್ರತೀ ದಿನ ಆಹಾರ ನೀಡುವ, ಆಪತ್ತಿಗೊಳಗಾದ ಪ್ರಾಣಿಗಳ ರಕ್ಷಣೆಗೆ ಧಾವಿಸುವ ಮಂಗಳೂರಿನ ರಜನಿ ಅವರ ಸೇವೆಯನ್ನು ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಅವರು ಪ್ರಸಂಶಿಸಿದ್ದಾರೆ.

ತನ್ನ ಅಧಿಕೃತ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಜನಿ ಅವರ ಫೋಟೊ ಸಹಿತ ಪೋಸ್ಟ್ ಮಾಡಿರುವ ಲಕ್ಷ್ಮಣ್ ಅವರು, “ಮಂಗಳೂರಿನ ರಜನಿ ಅವರು ನೂರಾರು ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ. ಪ್ರಾಣಿಗಳು ಒಂದು ವೇಳೆ ಆಪತ್ತಿಗೆ ಒಳಗಾದರೆ ಅವುಗಳ ರಕ್ಷಣೆಗೂ ಅವರು ಧಾವಿಸುತ್ತಾರೆ. ಪ್ರಾಣಿಗಳು ಒಂದೊಮ್ಮೆ ಬಾವಿಗೆ ಬಿದ್ದರೆ ಬಾವಿಗಳಿದು ಪ್ರಾಣಿಗಳ ರಕ್ಷಣೆ ಮಾಡುತ್ತಿದ್ದಾರೆ. ಅವರ ಸೇವೆಗೆ ಭೇಷ್ ಎನ್ನಲೇಬೇಕು’ ಎಂದು ಟ್ವೀಟ್ ಮಾಡಿದ್ದಾರೆ.