ಮಂಗಳೂರು: ವಿಮಾನ ನಿಲ್ದಾಣದಲ್ಲಿ ಕಾರಿನಲ್ಲಿ ನಾಡಕೋವಿ ಪತ್ತೆ:
ಆರೋಪಿಯ ಬಂಧನ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರವಾನಿಗೆ ಹೊಂದಿರದ 2 ನಾಡಕೋವಿಯನ್ನು ನ.30ರಂದು ಕಾರಿನಲ್ಲಿ ತಂದಿದ್ದ ವ್ಯಕ್ತಿಯನ್ನು ಬಂಧಿಸಿದ ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತ ವ್ಯಕ್ತಿಯನ್ನು ಬ್ರಹ್ಮಾವರ ಹಾವಂಜೆಯ ರೊನಾಲ್ಡ್ ಡಿ ಸೋಜಾ (24) ಎಂದು ಗುರುತಿಸಲಾಗಿದೆ.
ರೊನಾಲ್ಡ್ ಡಿ ಸೋಜಾ ಅವರು ಮಂಗಳವಾರ ಸಂಜೆ ಏರ್ ಇಂಡಿಯಾ ವಿಮಾನದಲ್ಲಿ ಕುವೈತ್ ನಿಂದ ಬರುವ ಭಾವನನ್ನು ಕರೆದುಕೊಂಡು ಬರಲು ಎಂದು ಮಂಗಳೂರಿನ ಏರ್ ಪೋರ್ಟ್ ಗೆ ಬಂದಿದ್ದು ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ವಿಮಾನ ನಿಲ್ದಾಣದ ಸಿಐಎಸ್ ಎಫ್ ಸಿಬ್ಬಂದಿ ಪರಿಶೀಲಿಸಿದಾ ಕಾರಿನಲ್ಲಿ ಎರಡು ನಾಡಕೋವಿಗಳು ಪತ್ತೆಯಾಗಿದ್ದು, ಪರವಾನಿಗೆ ಇಲ್ಲದ ಕೋವಿಯಾಗಿದ್ದು ಅವರ ಮೇಲೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ರೊನಾಲ್ಡ್ ಅವರು ಸೋಮವಾರ ಬೇಟೆಗೆ ಹೋಗಿದ್ದು ಎರಡು ನಾಡ ಕೋವಿಯನ್ನು ಕಾರಿನಲ್ಲಿಯೇ ಇರಿಸಿಕೊಂಡಿದ್ದರು ಎನ್ನಲಾಗಿದೆ.