February 20, 2026

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆಟೋದಲ್ಲಿ ಬಂದಿದ್ದ ದುಷ್ಕರ್ಮಿ: ಆಟೋ ಚಾಲಕ ಮಾಹಿತಿ

0
image_editor_output_image378169876-1699786221481.jpg

ಮಲ್ಪೆ; ಉಡುಪಿ ಮಲ್ಪೆ ಸಮೀಪದ ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಮಾಡಿರುವ ಪ್ರಕರಣ ಇಂದು ಬೆಳಗ್ಗೆ ನಡೆದಿದ್ದು, ಈ ಕುರಿತು ಮಹತ್ವದ ಮಾಹಿತಿಯೊಂದು ಸದ್ಯ ಪೊಲೀಸರಿಗೆ ಲಭ್ಯವಾಗಿದೆ.

ಬಿಳಿ ಬಣ್ಣದ ಶರ್ಟ್, ಬಿಳಿ ಬಣ್ಣದ ಮಾಸ್ಕ್ ಧರಿಸಿದ ಬೋಳು ತಲೆಯ ಅಪರಿಚಿತ ವ್ಯಕ್ತಿಯೊಬ್ಬ ಆಟೋದಲ್ಲಿ ಬಂದು ಈ ಹತ್ಯೆ ಮಾಡಿದ್ದು ಸಂತಕಟ್ಟೆಯಿಂದ ಆಟೋ ರಿಕ್ಷಾದಲ್ಲಿ ಬಂದಿದ್ದ ಆರೋಪಿಯನ್ನು ಚಾಲಕ ಘಟನಾ ಸ್ಥಳಕ್ಕೆ ಡ್ರಾಪ್ ಮಾಡಿದ ಕೇವಲ 15 ನಿಮಿಷಗಳಲ್ಲಿ ಆತ ಮರಳಿ ಸಂತೆಕಟ್ಟೆಗೆ ವಾಪಸ್ ಬಂದಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಹತ್ಯೆ ನಡೆದ ಮನೆಗೆ ಆರೋಪಿಯನ್ನು ಮೊದಲು ಡ್ರಾಪ್ ಮಾಡಿರುವ ಆಟೋ ಚಾಲಕ ಶ್ಯಾಮ್ ನೆಹರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಾನು ಅವನನ್ನು ಆತ ಹೇಳಿದ ವಿಳಾಸದ ಮನೆಗೆ ಡ್ರಾಪ್ ಮಾಡಿದ್ದೆ.ಆತ ಮುಖಕ್ಕೆ ಮಾಸ್ಕ್ ಧರಿಸಿದ್ದು , ಬೋಳು ತಲೆಯನ್ನು ಹೊಂದಿದ್ದ.ಜೊತೆ ಆತನ ಕೈಯಲ್ಲಿ ಬ್ಯಾಗ್ ಕೂಡ ಇತ್ತು.ನಾನು ಅವನನ್ನು ಇಳಿಸಿದ 15 ನಿಮಿಷಗಳಲ್ಲಿ ಆತ ಮತ್ತೆ ವಾಪಸ್ ನನ್ನ ಬಳಿ ಬಂದಿದ್ದ .ಆದ್ರೆ ಘಟನೆಯ ಬಗ್ಗೆ ಏನೂ ತಿಳಿಯದೆ ನಾನು ಅವನಿಗಾಗಿ ಕಾಯುತ್ತಿದ್ದೆ.ಆದ್ರೆ ಆತ ಇನ್ನೊಂದು ಆಟೋವನ್ನು ತೆಗೆದುಕೊಂಡು ಬೇಗ ಹೊರಡಲು ಅವಸರಿಸುತ್ತಿದ್ದ.ಎರಡನೇ ಆಟೋ ಡ್ರೈವರ್ ಅವರನ್ನು ಕರಾವಳಿ ಬೈಪಾಸ್‌ನಲ್ಲಿ ಡ್ರಾಪ್ ಮಾಡಿದರು. ಆ ವ್ಯಕ್ತಿ ಬೆಂಗಳೂರು ಉಚ್ಚಾರಣೆಯ ಕನ್ನಡವನ್ನು ಮಾತನಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾನೆ.

Leave a Reply

Your email address will not be published. Required fields are marked *

error: Content is protected !!