ಪೆರ್ಲ: ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಪೆರ್ಲದ ನಲ್ಕ ಬಿರ್ಮೂಲೆಯಲ್ಲಿ ಮಹಿಳೆಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಿರ್ಮೂಲೆ ನಿವಾಸಿ ನಾರಾಯಣ ಪಾಟಾಳಿ ಅವರ ಪತ್ನಿ ಯಶೋಧ (51) ಮೃತದೇಹ ಶುಕ್ರವಾರ ಮಧ್ಯಾಹ್ನ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದಂಪತಿಯ ಇಬ್ಬರು ಪುತ್ರರು ವಿದೇಶದಲ್ಲಿದ್ದು, ಪುತ್ರಿಯ ವಿವಾಹವಾಗಿದೆ. ಮನೆಯಲ್ಲಿ ದಂಪತಿಯ ಜತೆ ಯಶೋಧಾರ ಪೋಲಿಯೋ ರೋಗ ಬಾಧಿಸಿದ ಸಹೋದರಿ ವಾಸವಿದ್ದಾರೆ. ನಾರಾಯಣ ಪಾಟಾಳಿ ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ವೇಳೆ ಸಹೋದರಿ ಬಟ್ಟೆ ತೊಳೆಯಲು ಮನೆಯಿಂದ ಹೊರ ಹೋಗಿದ್ದು 1 ಗಂಟೆ ವೇಳೆ ಮನೆಯೊಳಗೆ ಬಂದಾಗ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅ
ಬದಿಯಡ್ಕ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆಗೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.





