May 9, 2026

ಮಂಗಳೂರು: ಅಕ್ರಮ ಎಂಡಿಎಂಎ ಮಾರಾಟ: ಮೂವರು ಆರೋಪಿಗಳು ಸಿಸಿಬಿ ಪೊಲೀಸರ ವಶಕ್ಕೆ
 

0
image_editor_output_image1632089425-1699286234274.jpg


ಮಂಗಳೂರು: ಸಿಸಿಬಿ ಪೊಲೀಸರಿಂದ ಮಾದಕ ವಸ್ತು( ಎಂಡಿಎಂಎ)ಮಾರಾಟ ಮಾಡುತ್ತಿದ್ದ ಮೂವರು ಮಡಿಕೇರಿ ಮೂಲದ ಆರೋಪಿಗಳನ್ನುಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಪ್ರಮೋದ್‌(30) ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕೊಯಿನೂರು,ಮೊಹಮ್ಮದ್‌ ರಾಶೀದ್‌(41) ಮಡಿಕೇರಿ ತಾಲೂಕಿನ ಶಕ್ತಿ ಪ್ರಸಾದ್‌ ರೆಸಿಡೆನ್ಸಿ ಬಳಿ ಕಾನ್ವೆಂಟ್‌ ಜಂಕ್ಷನ್‌, ದರ್ಶನ್‌(24) ಮಡಿಕೇರಿ ತಾಲೂಕಿನ ಕಡಗದಾಳು ಅಂಚೆ ಮತ್ತು ಗ್ರಾಮದವನು ಎಂದು ಗುರುತಿಸಲಾಗಿದೆ.

ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಪಳ್ನೀರು ಎಂಬಲ್ಲಿ ಬ್ಲೂ ಸ್ಟಾರ್ ಲಾಡ್ಜ್ ಬಳಿಯಲ್ಲಿ 3 ಜನ ವ್ಯಕ್ತಿಗಳು ಅಕ್ರಮವಾಗಿ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಸಿಸಿಬಿ ಪೊಲೀಸ್‌ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 75 ಸಾವಿರ ರೂ. ಮೌಲ್ಯದ 15 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಹಾಗೂ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟು ಸೊತ್ತಿನ ಮೌಲ್ಯ 95,000 ರೂ. ಎಂದು ಅಂದಾಜಿಸಲಾಗಿದೆ.ಆರೋಪಿತರಲ್ಲಿ ಪ್ರಮೋದ್ ಎಂಬಾತನ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಡಿಕೇರಿ ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ, ದರೋಡೆ ಪ್ರಕರಣಗಳು ದಾಖಲಾಗಿರುತ್ತವೆ.

ಮೊಹಮ್ಮದ್ ರಾಶೀದ್ ಎಂಬಾತನ ಮೇಲೆ ಮಡಿಕೇರಿ ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ಕೊಲೆ, ದರೋಡೆ, ಸುಲಿಗೆ ಪ್ರಕರಣಗಳು ದಾಖಲಾಗಿರುತ್ತವೆ. ಇನ್ನು ದರ್ಶನ್ ಎಸ್ ಎಂಬಾತನ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!