December 16, 2025

ಬೆಳ್ತಂಗಡಿ: ಮಹೇಶ್‌ ಶೆಟ್ಟಿ ಸಹಿತ ಇತರರ ವಿರುದ್ಧ ಮತ್ತೊಂದು ದೂರು ದಾಖಲು

0
image_editor_output_image1139833670-1698694007218.jpg

ಬೆಳ್ತಂಗಡಿ: ಉಜಿರೆಯಿಂದ ಧರ್ಮಸ್ಥಳಕ್ಕೆ ಅ. 29ರಂದು ಹಮ್ಮಿಕೊಂಡಿದ್ದ ಧರ್ಮಸಂರಕ್ಷಣ ಯಾತ್ರೆಯ ಸಲುವಾಗಿ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್‌ಗಳ ಸಮೀಪದಲ್ಲೇ ಇತರ ಬ್ಯಾನರ್‌ ಅಳವಡಿಸಿ ಪಾದಯಾತ್ರೆ ನಿಲ್ಲಿಸಲು ಒಳಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಮಹೇಶ್‌ ಶೆಟ್ಟಿ ಸಹಿತ ಇತರರ ವಿರುದ್ಧ ದೂರು ದಾಖಲಾಗಿದೆ.

ಧರ್ಮಸ್ಥಳ ನಿವಾಸಿ ಸಂದೀಪ್‌ ರೈ ಅವರ ದೂರಿನಂತೆ ಮಹೇಶ್‌ ಶೆಟ್ಟಿ ತಿಮರೋಡಿ, ಅನಿಲ್‌ ಕುಮಾರ್‌ ಅಂತರ, ಕಿರಣ್‌ ಗೌಡ, ಪ್ರಜ್ವಲ್‌ ಕೆ.ವಿ. ಗೌಡ, ಮನೋಹರ್‌ ಮನ್ನಡ್ಕ, ಮನೋಜ್‌ ಸಾಲ್ಯಾನ್‌ ಕುಂಜರ್ಪ ಮತ್ತು ಇತರರ ವಿರುದ್ಧ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಕದಡುವಂತಹ ಕೆಟ್ಟದಾಗಿ ಶಬ್ಧಗಳನ್ನು ಬರೆದ ಬ್ಯಾನರ್‌ ಅಳವಡಿಸಲು ಅನುಮತಿ ನೀಡಿದ ಉಜಿರೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ವಿರುದ್ಧ ದೂರು ನೀಡಲಾಗಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!