ವಿಟ್ಲ: ಬೊಳಂತಿಮೊಗರು ಸರಕಾರಿ ಪ್ರೌಢ ಶಾಲಾ ಕಾರ್ಯಾಧ್ಯಕ್ಷರಾಗಿ ಹಸೈನಾರ್ ನೆಲ್ಲಿಗುಡ್ಡೆ ಆಯ್ಕೆ
ಸರ್ಕಾರಿ ಪ್ರೌಢಶಾಲೆ ಬೊಳಂತಿಮೊಗರು ವಿಟ್ಲ ಇದರ ಶಾಲಾಭಿವೃದ್ಧಿ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ವಿ ಅಬ್ದುಲ್ ರಹಿಮಾನ್(ಹಸೈನಾರ್ ನೆಲ್ಲಿಗುಡ್ಡೆ) ನೇಮಕವಾಗಿದ್ದಾರೆ, ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿ ಮತ್ತು
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಡಾ.ರಾಜಾರಾಮ್ ಕೆ.ಬಿ ಹಾಗೂ ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೊಲ್ಯ ಶ್ರೀನಿವಾಸ್ ಶೆಟ್ಟಿ ಯವರ ಶಿಫಾರಸ್ಸಿನ ಮೇರೆಗೆ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ನೇಮಿಸಿ ಅದೇಶಿಸಿದ್ದಾರೆ.
ಇವರು ಪ್ರಸ್ತುತ ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾಗಿಯೂ,ದಾರ್ಮಿಕ,ಶೈಕ್ಷಣಿಕ, ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ, ಇವರು ವಿಟ್ಲ ಪಟ್ಟಣ ಪಂಚಾಯಿತಿಯಲ್ಲಿ ಮೂರು ಬಾರಿ ಸದಸ್ಯರಾಗಿ ಸೋಲಿಲ್ಲದ ಸರದಾರ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.






