ಉಪ್ಪಿನಂಗಡಿ: ಸ್ನಾನಕ್ಕೆಂದು ನೀರಿಗಿಳಿದ ಯುವಕ ನಾಪತ್ತೆ
ಉಪ್ಪಿನಂಗಡಿ: ಸ್ನಾನಕ್ಕೆಂದು ನೀರಿಗಿಳಿದ ಯುವಕ ಕಣ್ಮರೆಯಾದ ಘಟನೆ ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ಸಂಜೆ ನಡೆದಿದೆ.
ನದಿ ನೀರಿನಲ್ಲಿ ಒಟ್ಟು ಐದು ಮಂದಿ ಸ್ನಾನಕ್ಕೆ ಇಳಿದಿದ್ದು, ಐವರ ಪೈಕಿ ಛತ್ತಿಸ್ ಘಡ್ ನ ಸುಕ್ಮೊ ರಾಮ್ ಗಡ್ವೆ (21) ರವರು ಕಣ್ಮರೆಯಾಗಿದ್ದಾನೆ. ಯುವಕನ ಪತ್ತೆಗಾಗಿ ತೀವ್ರ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.





