May 9, 2026

5.04 ಕೋಟಿ ಮೌಲ್ಯದ ವಿವಿಧ ಡ್ರಗ್ಸ್ ವಶ: 10 ಮಂದಿಯ ಬಂಧನ

0
image_editor_output_image867022876-1698472581023.jpg

ಬೆಂಗಳೂರು: ಮಾದಕ ದಂಧೆಯ ವಿರುದ್ಧ ಸಮರ ಮುಂದುವರಿಸಿರುವ ಬೆಂಗಳೂರು ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಕಳೆದ ಹದಿನೈದು ದಿನಗಳ ಅವಧಿಯಲ್ಲಿ ನಗರಾದ್ಯಂತ 10 ಜನ ದಂಧೆಕೋರರನ್ನ ಬಂಧಿಸಿ 5.04 ಕೋಟಿ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಡುಗೋಡಿ, ಕೆ.ಆರ್‌.ಪುರ, ಸೋಲದೇವನಹಳ್ಳಿ, ಎಚ್‌ಎಸ್‌ಆರ್‌ ಲೇಔಟ್‌, ವೈಟ್‌ ಫೀಲ್ಡ್‌ , ಬಾಣಸವಾಡಿ, ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

8 ಜನ ವಿದೇಶಿ ಡ್ರಗ್‌ ಪೆಡ್ಲರ್‌ಗಳ ಸಹಿತ ಒಟ್ಟು 10 ಜನ ಡ್ರಗ್ಸ್‌ ದಂಧೆಕೋರು ಸೆರೆ ಸಿಕ್ಕಿದ್ದರು. ಬಂಧಿತರ ಬಳಿ 3.806 ಕೆ.ಜಿ ಎಂಡಿಎಂಎ ಕ್ರಿಸ್ಟಲ್ಸ್, 50 ಗ್ರಾಂ ಕೊಕೇನ್‌, 25 ಎಕ್ಸಟಿಸಿ ಪಿಲ್ಸ್, 50 ಎಲ್‌ ಎಸ್ಟಿ ಸ್ಟ್ರಿಪ್ಸ್‌ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ‌

Leave a Reply

Your email address will not be published. Required fields are marked *

error: Content is protected !!