March 18, 2026

ಕಾರ್ಖಾನೆಯಲ್ಲಿಯೇ ಮಾಲಕಿಯ ಕತ್ತು ಬಿಗಿದು ಕೊಲೆ

0
image_editor_output_image420958291-1698467188512.jpg

ಮೈಸೂರೂ: ಸ್ಥಗಿತಗೊಂಡಿದ್ದ ಕಾರ್ಖಾನೆಯಲ್ಲಿ ವೃದ್ಧ ಮಾಲಕಿಯ ಕತ್ತು ಬಿಗಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಬ್ಬಾಳದ ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಜಿಕೆಎನ್ ಚಿಕೋರಿ ಇಂಡಸ್ಟ್ರೀಸ್ ನಲ್ಲಿ ನಡೆದಿದೆ.

ಮಂಡ್ಯದ ವಿದ್ಯಾನಗರ ನಿವಾಸಿ ನಳಿನಿ (62) ಕೊಲೆಯಾದ ದುರ್ದೈವಿ. ಕೊಲೆಯಾಗಿರೊ ನಳಿನಿ ಸ್ಥಿತಿವಂತರಾಗಿದ್ದರು.

ಗಂಡ ರಮೇಶ್, ಮಂಡ್ಯದಲ್ಲಿ ಕಾಫಿಪುಡಿ ಅಂಗಡಿ ಹಾಗೂ ಹೆಬ್ಬಾಳ ಬಳಿ ಚಿಕೋರಿ ಕಾರ್ಖಾನೆಯನ್ನ ನಡೆಸುತ್ತಿದ್ದರು.

ಆದರೆ ಬರುಬರುತ್ತ ಸಾಕಷ್ಟು ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಮನೆಯನ್ನು ಬ್ಯಾಂಕ್ ನಲ್ಲಿ ಅಡ ಇಟ್ಟಿದ್ದರು. ಕಾರ್ಖಾನೆ ಬಂದ್ ಆಗಿದ್ದು, ನಳಿನಿ ಅವರು ಆಗಾಗ ಬಂದು ಆ ಕಾರ್ಖಾನೆಯನ್ನು ನೋಡಿಕೊಂಡು ಹೋಗುತ್ತಿದ್ದರು.

ಅದೇ ರೀತಿ ಕಾರ್ಖಾನೆ ನೋಡಲು ಬಂದ ನಳಿನಿ ಅವರು ರಾತ್ರಿ ಹತ್ತು ಗಂಟೆಯಾದರೂ ಸೊಸೆಯ ಮೊಬೈಲ್ ಕರೆಯನ್ನು ಸ್ವೀಕರಿಸಿಲ್ಲ.

ಹೀಗಾಗಿ ಅನುಮಾನಗೊಂಡ ಬೆಂಗಳೂರಿನಲ್ಲಿ ಇದ್ದ ಸೊಸೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಕಾರ್ಖಾನೆ ಬಳಿ ಹೋಗಿ ನೋಡಿದಾಗ ಕೊಲೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಹತ್ಯೆಯ ಹಿಂದೆ ಸಾಕಷ್ಟು ಅನುಮಾನಗಳು ಮೂಡಿವೆ.

Leave a Reply

Your email address will not be published. Required fields are marked *

You may have missed

error: Content is protected !!