ಮಂಗಳೂರು: ಹುಲಿ ಉಗುರು ಪೆಂಡೆಂಟ್ ಪ್ರಕರಣ: ಸಂಘಪರಿವಾರದ ಮುಖಂಡನ ಫೋಟೊ ವೈರಲ್
ಮಂಗಳೂರು: ಕರಾವಳಿಯ ಸಂಘಪರಿವಾರದ ಮುಖಂಡ ಹುಲಿ ಉಗುರು ಪೆಂಡೆಂಟ್ ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎನ್ನುವ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಕಾಪು ಬಜರಂಗದಳ ಸಂಚಾಲಕ ಸುಧೀರ್ ಸೋನು ಅವರು ತನ್ನ ಕೊರಳಿನಲ್ಲಿ ಭಾರೀ ಚಿನ್ನ ಧರಿಸಿಕೊಂಡು ಜನರ ಗಮನ ಸೆಳೆಯುತ್ತಿದ್ದರು.
ಇವರ ಚೈನ್‌ನ ಪೆಂಡೆಂಟ್‌ನಲ್ಲೂ ಹುಲಿ ಉಗುರು ಇರುವುದು ಕಂಡು ಬಂದಿದೆ. ಸುಧೀರ್ ಸೋನು ಹುಲಿ ಉಗುರು ಪೆಂಡೆಂಟ್ ಧರಿಸಿರುವುದು ಬೆಳಕಿಗೆ ಬಂದಿದೆ. ಸುಧೀರ್ ಸೋನು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಭಾಗಿಯಾಗುತ್ತಿದ್ದವರಾದ ಹಿನ್ನೆಲೆಯಲ್ಲಿ ಇವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಹುಲಿ ಉಗುರು ಪ್ರಕರಣ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸುತ್ತತೊಡಗಿದೆ.




