February 3, 2026

ಸುಳ್ಯ: ಬೊಲೆರೋ-ಪಿಕಪ್ ವಾಹನಗಳ ನಡುವೆ ಅಪಘಾತ: ಪ್ರಯಾಣಿಕರು ಪಾರು, ವಾಹನಗಳು ಜಖಂ

0
IMG-20231026-WA0036.jpg

ಸುಳ್ಯ: ಬೊಲೆರೋ ಮತ್ತು ಪಿಕಪ್ ಮಧ್ಯೆ ಪರಸ್ಪರ ಢಿಕ್ಕಿ ಸಂಭವಿಸಿ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡು ಎರಡೂ ವಾಹನಗಳು ಜಖಂಗೊಂಡ ಘಟನೆ ಅರಂತೋಡಿ‌ನಲ್ಲಿ ಅ.26ರಂದು ಸಂಜೆ ಸಂಭವಿಸಿದೆ.

ಸುಳ್ಯದಿಂದ ಮಡಿಕೇರಿ ಕಡೆಗೆ ಐಸ್ ಕ್ರೀಂ ಸಾಗಿಸುತ್ತಿದ್ದ ಪಿಕಪ್ ಹಾಗೂ ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಬೊಲೆರೋ ಮಧ್ಯೆ ಅರಂತೋಡಿನ ತೆಕ್ಕಿಲ್ ಬಳಿ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿ , ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!