ಉಳ್ಳಾಲ: ಭೂಗತ ಪಾತಕಿ ರವಿ ಪೂಜಾರಿ ಸಹಚರನ ಬಂಧನ
ತೊಕ್ಕೊಟ್ಟು: ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೇಶ್ ಸಹಚರ, ಹಲವು ಠಾಣೆಗಳಲ್ಲಿ ವಾರಂಟ್ ಎದುರಿಸುತ್ತಿದ್ದ ಆರೋಪಿ ಮಂಜೇಶ್ವರ ಪೈವಳಿಕೆಯ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾನನ್ನು ಮಂಗಳೂರು ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಬಂಧಿಸಿದೆ.
ಆರೋಪಿ ಹನೀಫ್ ನಟೋರಿಯಸ್ ಕ್ರಿಮಿನಲ್ ಆಗಿದ್ದು, ರವಿ ಪೂಜಾರಿಯ ಎಲ್ಲ ಕೃತ್ಯಗಳಿಗೆ ಮಂಗಳೂರು ಕಾರ್ಯಕ್ಷೇತ್ರ ಮಾಡಿಸಿಕೊಂಡಿದ್ದ.
ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣದಲ್ಲಿ ಹಲವು ಠಾಣೆಗಳಿಂದ ವಾರಂಟ್ ಎದುರಿಸುತ್ತಿದ್ದ. ಆತನ ವಿರುದ್ಧ ಈಗಾಗಲೇ ಕೊಣಾಜೆ, ಮಂಗಳೂರು ಉತ್ತರ, ಪುತ್ತೂರು, ಬರ್ಕೆ, ವಿಟ್ಲ, ಉಳ್ಳಾಲ, ಬೆಂಗಳೂರು ವಿಮಾನ ನಿಲ್ದಾಣ ಠಾಣೆಯಲ್ಲಿ ಪ್ರಕರಣಗಳಿವೆ.




