ಕೊಡಂಗಾಯಿ: ನಮ್ಮ ಕುಟುಂಬ ವಾಟ್ಸಪ್ ಗ್ರೂಪ್ ಆಯೋಜಿಸಿದ ‘ಕುಟುಂಬ ಸಂಗಮ’ ಕಾರ್ಯಕ್ರಮ ಯಶಸ್ವಿ
ವರದಿ: ಅಬೂ ಅಯಾನ್ ಕೊಡಂಗಾಯಿ
ಕೊಡಂಗಾಯಿ: ಇಲ್ಲಿನ “ನಮ್ಮ ಕುಟುಂಬ ವಾಟ್ಸಪ್ ಗ್ರೂಪ್” ಆಯೋಜಿಸಿದ ಕುಟುಂಬ ಸಂಗಮ ಹಾಗೂ ಇಸ್ಲಾಮಿಕ್ ಕಲಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು.
ಕುಟುಂಬ ಸಂಗಮ ಕಾರ್ಯಕ್ರಮದೊಂದಿಗೆ ಕುಟುಂಬ ಸದಸ್ಯರಿಗೆ ವಿವಿಧ ಇಸ್ಲಾಮಿಕ್ ಕಲಾ ಸಾಹಿತ್ಯ ಸಂಭ್ರಮದ ಮೂಲಕ ಪ್ರತಿಭಾನ್ವೇಷಣಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಅಕ್ಟೋಬರ್ 15 ಆದಿತ್ಯವಾರ ಆನ್ಲೈನ್ ಮುಖಾಂತರ ಆರಂಭಿಸಿದ ಸ್ಪರ್ಧಾ ಕಾರ್ಯಕ್ರಮ ಅಕ್ಟೋಬರ್ 21 ಶನಿವಾರ ತೆರೆದ ವೇದಿಕೆಯಲ್ಲಿ ಸಮಾಪ್ತಿಗೊಂಡಿತು.
“ನಮ್ಮ ಕುಟುಂಬದ” ಮಹಿಳೆಯರಿಗಾಗಿ ನಡೆಸಿದ ಆನ್ಲೈನ್ ಸ್ಪರ್ಧೆಯಲ್ಲಿ ವಿವಿಧ ರೀತಿಯ (ಪ್ರಬಂಧ, ಅರಬಿಕ್ ಕಾಲಿಗ್ರಾಫಿ,ಮೆಹಂದಿ ಡಿಸೈನ್,ಚಿತ್ರ ರಚನೆ) ಕಲೆಯಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಮಹಿಳೆಯರು ಪ್ರದರ್ಶಿಸಿದರು.
ಶನಿವಾರ ಅಸರ್ ನಮಾಝ್ ನಂತರ ನಡೆದ ಮೌಲಿದ್ ಮಜ್ಲಿಸ್ ಹಾಗೂ ತಹ್ಲೀಲ್ ಸಮರ್ಪಣೆ ಸ್ಥಳಿಯ ಖತೀಬ್ ಬಹು: ಬಿ ಎ ಸಿದ್ದೀಖ್ ಅರ್ಶದಿ ರವರ ನೇತೃತ್ವದಲ್ಲಿ ನಡೆಯಿತು.
ನಂತರ ತೆರೆದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ನಮ್ಮ ಕುಟುಂಬದ ನಾಲ್ಕನೇ ತಲೆಮಾರಿನ ಅಹ್ಮದ್ ಮಿಶ್ಬಾಹ್ ರವರ ಖಿರಾಅತ್ ನೊಂದಿಗೆ ಕಾರ್ಯಕ್ರಮ ಅಧಿಕೃತವಾಗಿ ಪ್ರಾರಂಭವಾಯಿತು.
ಸ್ಪರ್ಧೆಯಲ್ಲಿ ನಮ್ಮ ಕುಟುಂಬದ ಮಕ್ಕಳು ಹಾಗೂ ಪುರುಷರು (ಖಿರಾಅತ್, ಮದ್ಹ್ ಹಾಡು,ಪ್ರಸಂಗ,ಬುರ್ದಾ ಮಜ್ಲಿಸ್,) ಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ನೆರೆದ ಜನರ ಪ್ರಶಂಸೆಗೆ ಪಾತ್ರರಾದರು.
ನಂತರ ನಡೆದ ಕುಟುಂಬ ಸಂಗಮ ಕಾರ್ಯಕ್ರಮದಲ್ಲಿ ಜಿಲ್ಲೆಯ ಖ್ಯಾತ ಪ್ರೆರಣಾ ತರಬೇತಿದಾರರಾದ ಜನಾಬ್ ರಫೀಕ್ ಮಾಸ್ಟರ್ ಮಂಗಳೂರು ರವರು ಮಾತನಾಡಿ ಕುಟುಂಬ ಸಂಬಂಧ ಯಾಕೆ ಬೇಕು,ಅದು ಹೇಗಿರಬೇಕು,ಕುಟುಂಬ ಸಂಬಂಧ ಬೆಳೆಸುವ ಕುರಿತು ಇತ್ಯಾದಿ ವಿಷಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಕೊಡಂಗಾಯಿಯ ನಮ್ಮ ಕುಟುಂಬದ ಮೂಲ ವ್ಯಕ್ತಿಗಳೂ ಹಿರಿಯ ಚೇತನರೂ ಆಗಿರುವ ಜನಾಬ್ ಪಕ್ರಬ್ಬ- ಖದೀಜಮ್ಮ ದಂಪತಿಗೆ ವಂಶವೃಕ್ಷದ ಸರ್ವರೂ ಸೇರಿ ಗೌರವಾದರ ಪೂರ್ವಕ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಖ್ಯಾತ ಪ್ರೇರಣಾತರಬೇತುದಾರರಾದ ಜನಾಬ್ ರಫೀಕ್ ಮಾಸ್ಟರ್ ರವರನ್ನು ನಮ್ಮ ಕುಟುಂಬ ವಾಟ್ಸಪ್ ಗ್ರೂಪ್ ಅಡ್ಮಿನ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಪೆರುವಾಯಿ ರವರು ಸ್ಮರಣಿಕೆ ನೀಡಿ ಗೌರವಿಸಿದರು.
ಇಸ್ಲಾಮಿಕ್ ಕಲಾ ಸಾಹಿತ್ಯ ಸಂಭ್ರಮ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸ್ಮರಣಿಕೆ ಹಾಗೂ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿ ನಮ್ಮ ಕುಟುಂಬದ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಸ್ವಾಗತಿಸಿ
ಅಬ್ದುಲ್ ಮಜೀದ್ ಟಿ ಎಂ ಕಾರ್ಯಕ್ರಮವನ್ನು ನಿರೂಪಿಸದರು. ಕೊನೆಯಲ್ಲಿ ಜುನೈದ್ ಮದನಿ ರವರು ವಂದಿಸಿದರು.




