May 9, 2026

ಮದುವೆಯಾದ ಪ್ರೇಮಿಗಳನ್ನು ದೂರ ಮಾಡಿದ ಪೊಲೀಸರು

0
image_editor_output_image-1700363580-1697866137673.jpg

ಬಳ್ಳಾರಿ: ಮದುವೆಯಾಗಿ ನೋಂದಾಯಿಸಿಕೊಂಡಿದ್ದ ಪ್ರೇಮಿಗಳನ್ನು ಬಳ್ಳಾರಿ ಪೊಲೀಸರು ದೂರ ಮಾಡಿದ್ದಾರೆ. ಯುವತಿ ಕಾಣೆಯಾಗಿದ್ದಾಳೆ ಎಂಬ ದೂರಿನಿಂದ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ.

ಅವರಿಬ್ಬರು ಕಾಲೇಜಿನ ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದರು. ಆ ದಿನಗಳಿಂದಲೇ ಒಂದಾಗಿ ಬದುಕುವ ಕನಸು, ಕಾನೂನು ಪ್ರಕಾರ ಮದುವೆಗೆ ಅರ್ಹ ವಯಸ್ಸಿಗೆ ಬರುವ ತನಕ ಕಾದು ಮದುವೆ ಆಗಿದ್ದರು. ಬಳಿಕ ನೋಂದಣಿ ಸಹ ಮಾಡಿಸಿದ್ದರು. ಇನ್ನೇನೂ ನಮ್ಮ ಬದುಕು ನಿರಾಳ ಎಂದುಕೊಂಡಿದ್ದ ದಂಪತಿಯನ್ನು ಪೊಲೀಸರೇ ದೂರ ಮಾಡಿದ್ದಾರೆ.

ಯುವತಿ ಕಾಣೆಯಾಗಿದ್ದಾಳೆ ಎಂಬ ದೂರಿನ ಕಾರಣಕ್ಕೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಜೋಡಿಯನ್ನು ಇದೀಗ ಬೇರೆ ಮಾಡಿದ್ದಾರೆ. ಇದಕ್ಕೆ ಕಾರಣ ಜಾತಿಯ ವಿಚಾರ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯುವತಿಯ ಪೋಷಕರು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!