February 3, 2026

ಪುತ್ತೂರು: ಕಡಬದಿಂದ ಆಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಬಸ್ ಇಲ್ಲದೆ ವಿದ್ಯಾರ್ಥಿಗಳು,ಸಾರ್ವಜನಿಕರಿಗೆ ತೊಂದರೆ: ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳ ತಂಡದಿಂದ ಪುತ್ತೂರು ಶಾಸಕರಿಗೆ ಮನವಿ

0
IMG-20231013-WA0041.jpg

ಪುತ್ತೂರು: ಕಡಬದಿಂದ ಆಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಈ ಕುರಿತು ವಿದ್ಯಾರ್ಥಿಗಳ ತಂಡವೊಂದು ಪುತ್ತೂರು ಶಾಸಕರಿಗೆ ಮನವಿ ಮಾಡಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದೆ.

ವಿದ್ಯಾರ್ಥಿಗಳ ಸಂಕಷ್ಟವನ್ನು ಮನಗಂಡ ಪುತ್ತೂರು ಶಾಸಕ ಅಶೋಕ್ ರೈ, ಈ ಮಾರ್ಗವಾಗಿ ಹೆಚ್ಚುವರಿ ಬಸ್ ಓಡಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಶಾಸಕರ ಸೂಚನೆಯಂತೆ ಕಡಬ-ಅಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾರ್ಥಿಗಳಾದ ಝೈನುದ್ದೀನ್ ಅಲಂಕಾರು, ಹರಿಶ್ಚಂದ್ರ ಕೆ, ಚರಣ್ ಟಿ ಕೆ, ಮತ್ತು ಶ್ರವಣ್‌ರವರು ಮನವಿ ಮಾಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!