“ಪ್ರತಿದಿನ” ವೆಬ್ಸೈಟ್ ಹೆಸರಿನಲ್ಲಿ ಸುಳ್ಳು ಸುದ್ದಿ ವೈರಲ್: ಸುದ್ದಿ ತಿರುಚಿದ ಕಿಡಿಗೇಡಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು
ಮಂಗಳೂರು ಬ್ಯೂರೋ ವರದಿ: “ಪ್ರತಿದಿನ” ವೆಬ್ಸೈಟ್ ಹೆಸರಿನಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿರುವ ಹಾಗೂ ಸುದ್ದಿ ತಿರುಚಿದ ಕಿಡಿಗೇಡಿಗಳ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದೆ.

“ಮಂಗಳೂರು ಆಸೀಫ್ ಆಪತ್ಭಾಂದವ ಬಂಧನ” ಎನ್ನುವ ಸುದ್ದಿಯನ್ನು prthidina.com ಪ್ರಕಟಿಸಿತ್ತು. ಈ ಸುದ್ದಿಯನ್ನು ಹಕೀಂ ಕೂರ್ನಡ್ಕ ಎಂಬ ಹೆಸರಿನ ಕಿಡಿಗೇಡಿಯು “ಬಡ ರೋಗಿಯ ಭಯೋತ್ಪಾದಕ ಆಸೀಫ್ ಆಪತ್ಭಾಂದವ ಬಂಧನ” ಎಂದು ಸುಳ್ಳು ಸಂದೇಶವನ್ನು “ಯು.ಟಿ.ಖಾದರ್ ಅಭಿಮಾನಿಗಳ ಬಳಗ” ವಾಟ್ಸ್ ಅಪ್ ಗ್ರೂಪ್ ಗೆ ಹಂಚಿದ್ದಲ್ಲದೆ, ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ವೈಯಕ್ತಿಕ ದ್ವೇಷ ಸಾಧಿಸಲು ನಮ್ಮ ವೆಬ್ಸೈಟ್ ಹೆಸರನ್ನು ದರ್ಬಳಕೆ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ‘ಪ್ರತಿದಿನ’ ಮುಂದಾಗಿದೆ.
ಈ ಬಗ್ಗೆ ಪ್ರಕಟವಾದ ಸುದ್ದಿಗಳನ್ನು ತಿರುಚಿ ಸಾಮಾಜಿಕ ಜಾಲತಾಗಳಾದ ಫೇಸ್ ಬುಕ್ ಮತ್ತು ವಾಟ್ಸ್ ಆ್ಯಪ್ ಗಳಲ್ಲಿ ಸುಳ್ಳು ಸಂದೇಶಗಳನ್ನು ಹರಡಲಾಗುತ್ತಿದೆ. ಈ ಬಗ್ಗೆ ನಾಗರಿಕರು ಎಚ್ಚರಿಕೆಯಿಂದಿರಬೇಕು ಮತ್ತು ಯಾವುದೇ ಸುದ್ದಿಯನ್ನು ಅಧಿಕೃತ ಮೂಲಗಳಿಂದ ದೃಢಪಡಿಸಿಕೊಳ್ಳಬೇಕು.
‘ಪ್ರತಿದಿನ’ ವೆಬ್ ತಾಣದ ಸ್ಕ್ರೀನ್ ಶಾಟ್ ತೆಗೆದು ಎಡಿಟ್ ಮಾಡಿದ ಫೋಟೊವನ್ನು ಹಂಚಿದ, ಸುಳ್ಳು ಸಂದೇಶ ಹರಡಿದ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಲಾಗುವುದು.




