ಅಮೇರಿಕಾದಲ್ಲಿ ಗುಂಡೇಟಿಗೆ ಕೇರಳ ಮೂಲದ ಯುವತಿ ಮೃತ್ಯು
ಅಮೆರಿಕ: ಅಲಬಾಮಾ ರಾಜಧಾನಿ ಮಾಂಟ್‌ಗೊಮೆರಿಯಲ್ಲಿ 19 ವರ್ಷದ ಕೇರಳದ ಯುವತಿಯೊಬ್ಬಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಮೃತ ಯುವತಿಯನ್ನು ಮರಿಯಮ್ ಸುಸಾನ್ ಮ್ಯಾಥ್ಯೂ ಎಂದು ಗುರುತಿಸಲಾಗಿದೆ, ಆಕೆಯು ತನ್ನ ಮನೆಯಲ್ಲಿ ಮಲಗಿದ್ದಾಗ ಮೇಲಿನ ಮಹಡಿಯಿಂದ ಬಂದ ಗುಂಡುಗಳು ಸೀಲಿಂಗ್ ಮೂಲಕ ತೂರಿಕೊಂಡು ಆಕೆಗೆ ತಗಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ಮರಿಯಮ್ ಸುಸಾನ್ ಮ್ಯಾಥ್ಯೂ ಪತ್ತನಂತಿಟ್ಟ ಮೂಲದವರು ಎಂದು ತಿಳಿದುಬಂದಿದೆ. ಮರಿಯಂ ತನ್ನ ನಿವಾಸದಲ್ಲಿ ಮಲಗಿದ್ದ ವೇಳೆ ಮೇಲಿನ ಮಹಡಿಯಿಂದ ಬಂದ ಗುಂಡುಗಳು ಸೀಲಿಂಗ್ ತೂರಿಕೊಂಡು ಯುವತಿಗೆ ನಾಟಿರುವುದು ನಿಜಕ್ಕೂ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಗುಂಡೇಟಿಗೆ ಬಲಿಯಾದ ಮರಿಯಮ್ ಸುಸಾನ್ ಮ್ಯಾಥ್ಯೂ ಕೇರಳದ ಪತ್ತನಂತಿಟ್ಟ ಜಿಲ್ಲೆಯ ನಿರಣಂ ಬಳಿಯ ಎಡಪಲ್ಲಿ ಪರಂಬಿಲ್ ಮನೆಯ ಬೋಬನ್ ಮ್ಯಾಥ್ಯೂ ಮತ್ತು ಬಿನ್ಸಿ ದಂಪತಿಯ ಪುತ್ರಿ. ನಾಲ್ಕು ತಿಂಗಳ ಹಿಂದೆ ಕುಟುಂಬ ಅಮೆರಿಕಕ್ಕೆ ಬಂದಿತ್ತು. ಮೊದಲು ಅವರು ಮಸ್ಕತ್‌ನಲ್ಲಿ ನೆಲೆಸಿದ್ದರು. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ಬಳಿಕ ಮೃತದೇಹವನ್ನು ಕೇರಳಕ್ಕೆ ಕೊಂಡೊಯ್ಯಲು ಕ್ರಮಕೈಗೊಳ್ಳಲಾಗುತ್ತಿದೆ. ಅಲಬಮಾದ ಮಾಂಟ್ಗೋಮೆರಿಯಲ್ಲಿ ಈ ಘಟನೆಯು ನಡೆದಿದೆ.
ಈ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸೌತ್ ವೆಸ್ಟ್ ಅಮೆರಿಕ ಮಲಂಕರ ಆರ್ಥೋಡಾಕ್ಸ್ ಚರ್ಚ್ ಡಯಾಸಿಸ್ನ ಫಾದರ್ ಜಾನ್ಸನ್ ಪಪ್ಪಚನ್ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಸೂಸನ್ ಮ್ಯಾಥ್ಯೂ ಮನೆಯ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದು, ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಈ ಗುಂಡು ಸುಸನ್ಗೆ ತಗುಲಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಫೈರಿಂಗ್ ಆದ ತಕ್ಷಣವೇ ಸುಸನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.