ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ತೆರಳಿದ್ದಾಗ ಕಾರಿನ ಗಾಜು ಒಡೆದು ಕಳ್ಳತನ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಬಂದ ಭಕ್ತಾಧಿಯೋರ್ವರ ಕಾರಿನ ಗಾಜು ಒಡೆದು ಕಳ್ಳತನವಾಗಿದೆ.
ಈ ಘಟನೆ ಸೋಮವಾರ ನಡೆದಿದ್ದು, ಕಳುವಾಗಿರುವ ಬ್ಯಾಗ್ ನಲ್ಲಿ ಅಂದಾಜು 14 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಹಾಗೂ ಆಧಾರ ಕಾರ್ಡ್ ,ಎಟಿಎಂ, ಇತ್ಯಾದಿ ದಾಖಲಾತಿಗಳಿದ್ದು. ಕಳುವಾದ ಸೊತ್ತಿನ ಅಂದಾಜು ಮೌಲ್ಯ 42,000 ರೂ. ಎಂಬುದಾಗಿ ದೂರಿನಲ್ಲಿ ನೀಡಲಾಗಿದೆ.
ಈ ಘಟನೆ ಸಂಬಂಧಪಟ್ಟಂತೆ ಕೇರಳ ನಿವಾಸಿ ಸುಯಿಶ್ ಟಿ ಸಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಂಜೆ ಕೆಎಲ್ 60 ಎನ್ 4003 ನೇ ಕಾರಿನಲ್ಲಿ, ತನ್ನ ಚಿಕ್ಕಮ್ಮನೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಸ್ಥಾನಕ್ಕೆ ತೆರಳಿ ರಥ ಬೀದಿಯ ಪಕ್ಕದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದಾರೆ.




