March 18, 2026

ಮೂಡುಬಿದಿರೆ: ಆಟೋ-ಬಸ್ ನಡುವೆ ಅಪಘಾತ: ವೃದ್ಧೆ ಮೃತ್ಯು, ಸಣ್ಣಪುಟ್ಟ ಗಾಯಗಳೊಂದಿಗೆ ಇಬ್ಬರು ಪಾರು

0
IMG-20231009-WA0001.jpg


ಮೂಡುಬಿದಿರೆ: ಖಾಸಗಿ ಶಿಕ್ಷಣ ಸಂಸ್ಥೆಯ ಬಸ್ಸು ಮತ್ತು ಆಟೋ ರಿಕ್ಷಾ ಮುಖಾಮುಖಿ ಢಿಕ್ಕಿಯಾದ ಪರಿಣಾಮವಾಗಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆ ಮೃತಪಟ್ಟಿದ್ದಾರೆ.

ಸುರತ್ಕಲ್ ನ ಆಲಿಯಮ್ಮ (76) ಮೃತಪಟ್ಟ ವೃದ್ಧೆ.

ಮೂಡುಬಿದಿರೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುರತ್ಕಲ್ ನಿಂದ ಬೀಪಾತಿಮ, ಆಯೀಷಾ ಹಾಗೂ ಆಲಿಯಮ್ಮ ಎಂಬವರು ಆಟೋದಲ್ಲಿ ಬರುತ್ತಿದ್ದ ಸಂದರ್ಭ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಸಂಪಿಗೆಯಲ್ಲಿ ಮೂಡುಬಿದಿರೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಕಾಲೇಜಿನ ಬಸ್ ಢಿಕ್ಕಿ ಹೊಡೆದಿದೆ.

ಈ ಸಂದರ್ಭ ತೀವ್ರವಾಗಿ ಗಾಯಗೊಂಡ ಆಲಿಯಮ್ಮ ಕೊನೆಯುಸಿರೆಳೆದಿದ್ದು, ಉಳಿದಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಸ್ಸಿನ ಚಾಲಕ ಸಂದೇಶ್ ನಾಯ್ಕ್ ನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!