March 18, 2026

ಮುಳಿಯ, ಬೈರಿಕಟ್ಟೆ, ಅಳಿಕೆ, ವಿಟ್ಲ, ಪುತ್ತೂರು ಮಾರ್ಗದಲ್ಲಿ ಸರಕಾರಿ ಬಸ್ ಆರಂಭಿಸಿ ಇಂದಿಗೆ ಒಂದು ವರ್ಷ: ಚಾಲಕ ಮತ್ತು ನಿರ್ವಾಹಕರಿಗೆ ಗೌರವ

0
IMG-20231006-WA0028.jpg

ಮುಳಿಯ, ಬೈರಿಕಟ್ಟೆ, ಅಳಿಕೆ, ವಿಟ್ಲ, ಪುತ್ತೂರು ಮಾರ್ಗದಲ್ಲಿ ಸರಕಾರಿ ಬಸ್ ಆರಂಬಿಸಿ ಒಂದು ವರ್ಷ ಆಗಿದ್ದು ಈ ಸಂದರ್ಭದಲ್ಲಿ ಎಂ ವಿಶ್ವನಾಥ ಕುಲಾಲ್ ಇವರ ನೇತೃತ್ವದಲ್ಲಿ ಚಾಲಕ ಮತ್ತು ನಿರ್ವಾಹಕರನ್ನು ಗೌರವಿಸಲಾಯಿತು.

ಅಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಮಾಜಿ ಅಧ್ಯಕ್ಷ ಕಾನ ಈಶ್ವರ ಭಟ್, ಉಪಾಧ್ಯಕ್ಷೆ ಸರಸ್ವತಿ ಅಳಿಕೆ, ಸದಸ್ಯರುಗಳಾದ ಸದಾಶಿವ ಶೆಟ್ಟಿ ಹಾಗೂ ಸೆಲ್ವಿನ್ ಡಿ ಸೋಜಾ, ಜಯಪ್ರಕಾಶ್ ಡಿ ಸೋಜಾ, ರಾಮ ನಾಯ್ಕ ಕೇಕನಾಜೆ, ನಾರಾಯಣ ನಾಯ್ಕ ಮುಳಿಯ, ಪ್ರಶಾಂತ್ ಭಟ್ ಬಳಕ್ಕ, ಗಣೇಶ್ ಭಟ್ ಅಂಗ್ರಿ, ರಾಜೇಶ್ ಪೂಜಾರಿ, ಅಳಿಕೆ ಶಾಲಾ ಮಕ್ಕಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಮಾಜಿ ಪುತ್ತೂರು ಶಾಸಕರುಗಳಾ ಶಕುಂತಲಾ ಶೆಟ್ಟಿ ಹಾಗೂ ಸಂಜೀವ ಮಠಂದೂರರವರ ಮುತುವರ್ಜಿಯಿಂದ ಈ ಬಸ್ ಸಂಚರಿಸುತ್ತವೆ

Leave a Reply

Your email address will not be published. Required fields are marked *

error: Content is protected !!