April 12, 2025

ಟರ್ಕಿ ಸಂಸತ್ತಿನ ಬಳಿ ಸ್ಫೋಟ: ಇಬ್ಬರು ಗಾಯ

0

ಟರ್ಕಿ: ರಾಜಧಾನಿಯ ಅಂಕಾರದಲ್ಲಿ ಸಚಿವಾಲಯದ ಕಟ್ಟಡದ ಮುಂದೆ ಆತ್ಮಹತ್ಯಾ ಬಾಂಬರ್ ಸ್ಫೋಟಕ ಸಾಧನವನ್ನು ಸ್ಫೋಟಿಸಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆಂತರಿಕ ಸಚಿವರು ಹೇಳಿದ್ದಾರೆ.

ಸಂಸತ್ ಭವನದ ಸುತ್ತ ಹಾಗೂ ಸನಿಹದಲ್ಲಿರುವ ಆಂತರಿಕ ಸಚಿವಾಲಯದ ಕಟ್ಟಡದ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಗುಂಡಿನ ಸದ್ದು ಕೂಡ ಕೇಳಿಬಂದಿದ್ದು, ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿವೆ ಎಂದು ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.

 

 

Leave a Reply

Your email address will not be published. Required fields are marked *

error: Content is protected !!