September 26, 2026

ಬೈಂದೂರು: ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ದಂಪತಿ ಸ್ಥಳದಲ್ಲೇ ಮೃತ್ಯು

0
IMG-20230929-WA0067.jpg

ಬೈಂದೂರು: ಕೆಲಸಕ್ಕೆ ಹೋಗುವ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಮನೆ ತೋಟದ ಜಮೀನಿನಲ್ಲಿ ನಡೆದಿದೆ.

ಮಹಾಬಲ ದೇವಾಡಿಗ (58), ಲಕ್ಷ್ಮಿ ಮಹಾಬಲ ದೇವಾಡಿಗ (48) ಮೃತರು.

 

ಮಧ್ಯಾಹ್ನದ ವೇಳೆ ಮನೆ ಕೆಲಸಕ್ಕೆ ಹೋಗುವಾಗ ಪತಿಗೆ ವಿದ್ಯುತ್ ಶಾಕ್ ತಗುಲಿದ್ದು ಅವರನ್ನು ಪತ್ನಿ ರಕ್ಷಿಸಲು ಹೋಗಿ ದಂಪತಿಗಳು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ವೃತ್ತ ನಿರೀಕ್ಷಕರು ಜಯರಾಮ್ ಡಿ. ಗೌಡ ,ಕಂದಾಯ ಆರ್.ಐ . ರಾಘವೇಂದ್ರ ದೇವಾಡಿಗ,ಸುಳ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ್ ಪುತ್ರನ್, ಶೇಖರ್ ಬಳೆಗಾರ, ಗಂಗೊಳ್ಳಿ ಜೆಇ ದಿನೇಶ್ ಶೆಟ್ಟಿ, ಸುಳ್ಸೆ ಗ್ರಾಮ ಪಂಚಾಯತ್ ಗ್ರಾಮ ಕರಣಿಕ ಸೋಮಪ್ಪ, ಹಾಗೂ ಪೊಲೀಸ್ ಸಿಬ್ಬಂದಿಗಳು, ಮೆಸ್ಕಾಂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.

ಪ್ರಕರಣ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!