ವಿಟ್ಲ: ಆಟೋ ಚಾಲಕನಿಗೆ ತಂಡದಿಂದ ಹಲ್ಲೆ:
ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಆಟೋ ಚಾಲಕನಿಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ತಂಡಯೊಂದು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ವಿಟ್ಲದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ.
ವಿಟ್ಲ ಕಸಬ ಗ್ರಾಮದ ನೆಲ್ಲಿಗುಡ್ಡೆ ಪಲೇರಿ ನಿವಾಸಿ ಮಹಮ್ಮದ್ ಸುಹೈಲ್ (25) ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
27-09-2023 ರಂದು ರಾತ್ರಿ ಕಂಬಳಬೆಟ್ಟುವಿನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗುವಾಗ ಸುಹೈಲ್ ಹಾಗೂ ಆರೋಪಿ ಹಾರೀಸ್ ರವರಿಗೂ ಮಾತುಕತೆಯಾಗಿತ್ತು. ಇದರ ಮುಂದುವರಿದ ಭಾಗವಾಗಿ ದಿನಾಂಕ:28-09-2023 ರಂದು ಬೆಳಿಗ್ಗೆ ಸುಹೈಲ್ ತನ್ನ ಅಟೋರಿಕ್ಷಾದಲ್ಲಿ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ತಲುಪಿದಾಗ ಪ್ರಕರಣದ ಆರೋಪಿ ಹಾರೀಸ್ ಎಂಬಾತನು ಆತನ ಅಟೋರಿಕ್ಷಾದಲ್ಲಿ ಅಶ್ರಫ್ ಉರಿಮಜಲು, ರಿಯಾಝ್ ಉರಿಮಜಲು, ಅಚ್ಚುಕು ಕೊಲ್ಪೆ ರವರೊಂದಿಗೆ ಬಂದು ಸುಹೈಲ್ ಅಟೊ ರಿಕ್ಷಾಕ್ಕೆ ಅಡ್ಡ ಇಟ್ಟು ತಡೆದು ನಿಲ್ಲಿಸಿ ಹಾರೀಸ್ ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಅಟೋರಿಕ್ಷಾದಲ್ಲಿದ್ದ ಕತ್ತಿ ಹಾಗೂ ದೊಣ್ಣೆಯನ್ನು ತೆಗೆದು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡ ಸುಹೈಲ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
