ಬುದ್ಧಿವಾದ ಹೇಳಿದ ಪೊಲೀಸ್ ಪೇದೆಯ ಹೊಸ ಸ್ಕೂಟಿಗೆ ಬೆಂಕಿ ಹಚ್ಚಿದ ವ್ಯಕ್ತಿ

ಚಿಕ್ಕಬಳ್ಳಾಪುರ: ಬುದ್ಧಿವಾದ ಹೇಳಿದಲ್ಲೆ ಪೊಲೀಸ್ ಪೇದೆಯ ಫಾಲೋ ಮಾಡಿಕೊಂಡು ಹೋಗಿ ಮನೆಯ ಮುಂದೆ ನಿಲ್ಲಿಸಿದ್ದ ಹೊಸ ಸ್ಕೂಟಿಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ.
ಗುಡಿಬಂಡೆ ನಗರದ ಹಣ್ಣಿನ ವ್ಯಾಪಾರಿ ಖಲೀಂ ಉಲ್ಲಾ ತನ್ನ ಸಹೋದರರ ಜೊತೆ ಗಲಾಟೆ ಮಾಡಿಕೊಂಡು ಆಸ್ಪತ್ರೆಗೆ ಆಗಮಿಸಿದ್ದು ಆಸ್ಪತ್ರೆಯಲ್ಲಿ ವಿನಾಕಾರಣ ಕೂಗಾಟ ನಡೆಸಿ ರಂಪಾಟ ಮಾಡ್ತಿದ್ದ.
ವಿಷಯ ತಿಳಿದು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ ಎಎಸ್‍ಐ ನಂಜುಂಡ ಶರ್ಮಾ ಸೇರಿ ಇತರೆ ಪೊಲೀಸರು ಹೋಗಿ ಅಸಾಮಿ ಖಲೀಂ ಉಲ್ಲಾಗೆ ಬೈದು ಬುದ್ಧಿವಾದ ಹೇಳಿದ್ದರು.